ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹದೊಳಗಿರುವ ಅಂಗಾಂಗಗಳನ್ನು ಚುರುಕಾಗಿಸುತ್ತದೆ. ನಿಮ್ಮ ದೇಹದಲ್ಲಿರುವ ಟಾಕ್ಸಿನ್ ಗಳನ್ನು ಹೊರಹಾಕುತ್ತದೆ. ಊಟಕ್ಕೆ ಅರ್ಧಗಂಟೆ ಮೊದಲು ಒಂದು ಲೋಟ ನೀರು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
ಸ್ನಾನಕ್ಕೆ ಇಳಿಯುವ ಮುನ್ನ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ. ಮಲಗುವ ಮುನ್ನ ಒಂದು ಲೋಟ ನೀರು ಕುಡಿಯುವುದು ಕೂಡ ಒಳ್ಳೆಯ ಅಭ್ಯಾಸ. ಇದರಿಂದ ರಾತ್ರಿ ಪೂರಾ ನಿಮ್ಮ ದೇಹದಲ್ಲಿ ನೀರಿನ ಕೊರತೆಯಾಗದಂತೆ ತಡೆಯಬಹುದು.
ಆದರೆ ಊಟವಾದ ತಕ್ಷಣ ನೀರು ಕುಡಿಯುವುದು ಒಳ್ಳೆಯದಲ್ಲ. ಊಟ ಆರಂಭಿಸುವ ಸಮಯದಲ್ಲೂ ನೀರು ಸೇವನೆ ಬೇಡ. ಯಾಕಂದ್ರೆ ಅದು ಡೈಜೆಸ್ಟಿವ್ ಜ್ಯೂಸ್ ಅನ್ನು ಡೈಲ್ಯೂಟ್ ಮಾಡಿಬಿಡುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳಲು ಬಿಡುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.