ಬೆಂಗಳೂರು : ತುಂಬಾ ಕೋಲ್ಡ್ ವಸ್ತುಗಳನ್ನು ಸೇವಿಸಿದಾಗ ಗಂಟಲಿನಲ್ಲಿ ಇನ್ ಫೆಕ್ಷನ್ ಆಗುತ್ತದೆ. ಇದರಿಂದ ಗಂಟಲಿನಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರ ಜೊತೆಗೆ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಇದು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.
ಶುಂಠಿ ½ ಚಮಚ ಹಾಗೂ ಬೆಲ್ಲ1/2 ಚಮಚ ಇವೆರಡನ್ನು ಸೇರಿಸಿ ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಊಟಕ್ಕಿಂತ ½ ಗಂಟೆ ಮೊದಲು ತಿನ್ನಿ. ಹೀಗೆ ಮಾಡಿದರೆ 3-4 ದಿನದಲ್ಲೇ ಗಂಟಲು ನೋವು ಮಡಿಮೆಯಾಗುತ್ತದೆ. ಆದರೆ ಇದನ್ನು 10 ದಿನ ಮಾಡಿದರೆ ಗಂಟಲು ನೋವು ಪೂರ್ತಿವಾಸಿಯಾಗುತ್ತದೆ.
ಮಾವಿನ ಮರದ ಚಿಗುರು ಎಲೆಯನ್ನು ಕ್ನೀನ್ ಮಾಡಿ ಪ್ರತಿದಿನ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. 1ಗ್ಲಾಸ್ ಉಗುರುಬೆಚ್ಚಗಿರುವ ನೀರಿಗೆ ½ ನಿಂಬೆ ಹಣ್ಣಿನ ರಸ ಹಾಗೂ 2 ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಪ್ರತಿದಿನ 3 ಬಾರಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.