ಬೆಂಗಳೂರು: ಸಿಟ್ಟು ಬಂದಾಗ ಮನುಷ್ಯ ಅದನ್ನು ಹಲವು ರೀತಿಯಲ್ಲಿ ಹೊರಹಾಕುತ್ತಾನೆ. ಕೆಲವರು ಆ ಹತಾಶೆಯನ್ನು ಹೊರಹಾಕಲು ಲೈಂಗಿಕ ಕ್ರಿಯೆಯ ಮೊರೆ ಹೋಗುತ್ತಾರೆ!
ಹೆಚ್ಚಿನ ಪುರುಷರು ತಮ್ಮ ಹತಾಶೆ, ಸಿಟ್ಟನ್ನು ಹೊರಹಾಕುವುದು ಸಂಗಾತಿಯ ಮೇಲೆ. ಕೆಲವರು ಇದನ್ನು ಬಾಯಿ ಮಾತಿನ ಮೂಲಕ ತೀರಿಸಿಕೊಂಡರೆ ಇನ್ನು ಕೆಲವರು ಲೈಂಗಿಕ ಕ್ರಿಯೆಯ ಮೂಲಕವೂ ಹೊರಹಾಕುತ್ತಾರೆ. ಆದರೆ ಹೀಗೆ ಮಾಡುವಾಗ ಸಂಗಾತಿಗೆ ನೋವಾಗದಂತೆ ಎಚ್ಚರಿಕೆ ವಹಿಸಿದರೆ ನಿಮ್ಮ ಸಂಬಂಧ ಚೆನ್ನಾಗಿರಬಹುದು.