ಬೆಂಗಳೂರು : ಮುಖದ ಮೇಲೆ ಇರುವ ಕೆಲವು ಮಚ್ಚೆಗಳು ಮುಖದ ಅಂದವನ್ನು ಕೆಡಿಸುತ್ತದೆ. ಕೆಲವರಿಗೆ ತುಟಿಯಂಚಲಿ ಇದ್ರೆ ಮಾತ್ರ ಅದು ಮುಖದ ಅಂದವನ್ನು ದುಪ್ಪಟ್ಟು ಮಾಡುತ್ತದೆ. ಆದರೆ ಮುಖದ ಎಲ್ಲಾ ಭಾಗಗಳಲ್ಲಿ ಕಂಡುಬಂದರೆ ತುಂಬಾ ಚಿಂತೆ ಮಾಡಲು ಶುರುಮಾಡುತ್ತಾರೆ. ಶಸ್ತ್ರ ಚಿಕಿತ್ಸೆ ಮಾಡಿದರೆ ಅಡ್ಡ ಪರಿಣಾಮಗಳಾಗುವ ಸಂಭವವಿರುತ್ತದೆ. ಕೆಲವು ಮನೆಮದ್ದಿನಿಂದ ಇವುಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ವಿನೆಗರ್ ತೆಗೆದುಕೊಂಡು ಹತ್ತಿಯ ಸಹಾಯದಿಂದ ಮಚ್ಚೆಯಿರುವ ಜಾಗಕ್ಕೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ಉಗುರು ಬೆಚ್ಚಿಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ಹೀಗೆ ಪ್ರತಿದಿನ ಹಚ್ಚಿಕೊಂಡರೆ ಮಚ್ಚೆ ಉದುರಿ ಹೋಗುತ್ತದೆ.
ರೋಸ್ ವಾಟರ್ ಅನ್ನು ಸ್ವಲ್ಪ ಸಮಯ ಬಿಸಿಲಿನಲ್ಲಿ ಇಟ್ಟು ನಂತರ ಮಚ್ಚೆಯಿರುವ ಜಾಗಕ್ಕೆ ಹಚ್ಚಿ. ಇದರಿಂದ ಕ್ರಮೇಣ ಮಚ್ಚೆ ಹೊಳಪು ಕಳೆದುಕೊಂಡು ಚರ್ಮ ಸ್ವಚ್ಚವಾಗುತ್ತ ಬರುತ್ತದೆ.
ಪಪ್ಪಾಯ ಹಣ್ಣು ಅಥವಾ ಎಲೆಯನ್ನು ಕಿತ್ತಾಗ ಬರುವ ಬಿಳಿ ಹಾಲನ್ನು ಮಚ್ಚೆಯ ಮೇಲೆ ಹಾಕಿ. ಆದರೆ ಈ ಹಾಲನ್ನು ಚರ್ಮಕ್ಕೆ ತಾಗದಂತೆ ಹಚ್ಚಿ. ಇದನ್ನು ಪ್ರತಿದಿನ ಮಾಡಿದರೆ 3-4 ದಿನದಲ್ಲಿ ಅದು ಉದುರಿ ಹೋಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ