ಬೆಂಗಳೂರು: ಬೇಸಿಗೆಯಲ್ಲಿ ಬೆವರು ಸಾಲೆ ಸಮಸ್ಯೆ ತೀರಾ ಕಿರಿ ಕಿರಿ ಉಂಟು ಮಾಡುತ್ತದೆ. ಮೈ ತುಂಬಾ ಕೆಂಪಗಿನ ಅತೀ ಚಿಕ್ಕ ಗುಳ್ಳೆಗಳೇಳುತ್ತದೆ. ಇದಕ್ಕೆ ಮನೆಯಲ್ಲೇ ಬೇಕಿಂಗ್ ಸೋಡಾ ಬಳಸಿ ಪರಿಹಾರ ಕಂಡುಕೊಳ್ಳಬಹುದು.
ಮಾಡುವುದು ಹೇಗೆ?
ಒಂದು ಕಪ್ ತಂಪು ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ. ಶುದ್ಧ ಬಟ್ಟೆಯನ್ನು ಆ ಮಿಶ್ರಣದಲ್ಲಿ ಮುಳುಗಿಸಿ ಒದ್ದೆ ಮಾಡಿ. ಇದನ್ನು ಗುಳ್ಳೆಗಳು ಇರುವ ಜಾಗದಲ್ಲಿ 10 ನಿಮಿಷ ಕಾಲ ಇಡಿ. ಇದೇ ರೀತಿ ಆಗಾಗ ಮಾಡುತ್ತಿದ್ದರೆ, ತುರಿಕೆ, ಬಾತುಕೊಳ್ಳುವುದು ಮುಂತಾದ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
ಬೇಕಿಂಗ್ ಸೋಡಾ ಸಿಗದಿದ್ದರೆ, ಕೇವಲ ಐಸ್ ಕ್ಯೂಬ್ ಬಳಸಿ ತುರಿಕೆಯಿರುವ ಜಾಗದಲ್ಲಿ ಕೆಲ ಕಾಲ ಇಡುತ್ತಿದ್ದರೂ ಸಾಕು. ಇದನ್ನು ಮತ್ತೆ ಮತ್ತೆ ಮಾಡುತ್ತಿದ್ದರೆ, ತುರಿಕೆಯ ಕಿರಿ ಕಿರಿ ತಪ್ಪಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ