ಬೆಂಗಳೂರು: ಡುಮ್ಮಿಯಾಗಿ ಬಿಟ್ಟೆನಲ್ಲಾ? ಹೇಗಪ್ಪಾ ಸಣ್ಣವಾಗೋದು ಎಂಬ ಚಿಂತೆ ಹಲವರದ್ದು. ಸುಲಭವಾಗಿ ಏಳೇ ದಿನಗಳೊಳಗೆ ತೂಕ ಇಳಿಸುವ ಐಡಿಯಾ ಬೇಕಾರೆ ಹೀಗೆ ಮಾಡಿ.
ದಿನ 1
ಆದಷ್ಟು ನೀರಿನಂಶವಿರುವ ಹಣ್ಣುಗಳನ್ನು ಸೇವಿಸಿ. ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರಬೂಜ ಹಾಗೂ ಅದರ ಜತೆಗೆ ಬಾಳೆ ಹಣ್ಣು ಸೇವನೆಗೆ ಅಡ್ಡಿಯಿಲ್ಲ.
ದಿನ 2
ಎರಡನೇ ದಿನ ನಿಮ್ಮ ತಟ್ಟೆಯಲ್ಲಿ ಆದಷ್ಟು ತರಕಾರಿಗಳು ಇರುವಂತೆ ನೋಡಿಕೊಳ್ಳಿ. ಅದರಲ್ಲೂ ವಿಶೇಷವಾಗಿ ಹಸಿ ತರಕಾರಿ ಸೇವಿಸಿ. ಇದರ ಜತೆಗೆ ಬೇಯಿಸಿ ಆಲೂಗಡ್ಡೆ, ಜತೆಗೆ ಸಾಕಷ್ಟು ನೀರು ಕುಡಿಯಿರಿ. ಆದರೆ ಈ ದಿನ ಮೊಟ್ಟೆ, ಮಶ್ರೂಮ್ ನಂತಹ ಆಹಾರ ಸೇವನೆ ಮಾಡಬೇಡಿ.
ದಿನ 3
ಮೊದಲೆರಡು ದಿನ ತಿಂದ ಆಹಾರಗಳನ್ನೇ ಸೇವಿಸಬೇಕು. ಆದರೆ ಆಲೂಗಡ್ಡೆ, ಮಾಂಸ, ಡೈರಿ ಉತ್ಪನ್ನಗಳು, ಬಾಳೆಹಣ್ಣಿನ ಸೇವನೆ ಬೇಡ. ಆದರೆ ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.
ದಿನ 4
ನಾಲ್ಕನೇ ದಿನ ಬಾಳೆ ಹಣ್ಣಿನ ಜ್ಯೂಸ್ ಅಥವಾ ಸೂಪ್ ಮಾಡಿಕೊಂಡು ಯಥೇಚ್ಛವಾಗಿ ಸೇವಿಸಿ. ಸುಮಾರು 8 ಬಾಳೆ ಹಣ್ಣಿನ ಜತೆಗೆ, ಹಾಲು, ನೀರು ಸಾಕಷ್ಟ ಪ್ರಮಾಣದಲ್ಲಿ ಹೊಟ್ಟೆಗೆ ಇಳಿಯಲಿ.
ದಿನ 5
ಈಗ ನೀವು ಗುರಿ ಸನಿಹ ಮುಟ್ಟಿದ್ದೀರಿ. ಇಂದು ಧಾನ್ಯದ ರೂಪದಲ್ಲಿ ಬ್ರೌನ್ ರೈಸ್ ಸೇವಿಸಬಹುದು. ಜತೆಗೆ ರೆಡ್ ಮೀಟ್, ಮೀನು, ಚಿಕನ್, ಚೀಸ್, ಸೌತೆಕಾಯಿ, ಟೊಮೆಟೊ, ಕ್ಯಾಬೇಜ್, ಮೊಸರು ಸೇವಿಸಬಹುದು.
ದಿನ 6
ಈವತ್ತು ನಿಮ್ಮನ್ನು ನೋಡಿ ನೀವೇ ಖುಷಿಪಟ್ಟುಕೊಳ್ಳುತ್ತೀರಿ. ಬ್ರೌನ್ ರೈಸ್, ಬೇಯಿಸಿದ ತರಕಾರಿ, ಕಡಲೆ ಬೇಳೆ, ಚಿಕನ್, ಮೀನು ಸೇವಿಸಬಹುದು. ಆದರೆ ಡೈರಿ ಉತ್ಪನ್ನ, ಬೀಫ್, ಮಾವಿನ ಹಣ್ಣು, ಬಾಳೆಹಣ್ಣನ್ನು ಪಕ್ಕಕ್ಕೂ ಸೇರಿಸಬೇಡಿ.
ದಿನ 7
ಕೊನೆಯ ದಿನ ಆದಷ್ಟು, ಹಣ್ಣಿನ ರಸ, ಜ್ಯೂಸ್, ತರಕಾರಿ, ಬ್ರೌನ್ ರೈಸ್ ತಿಂದರೆ ಸಾಕು. ಇಂದೂ ಕೂಡಾ ಡೈರಿ ಉತ್ಪನ್ನ, ಬೀಫ್, ಮಾವಿನ ಹಣ್ಣು, ಬಾಳೆಹಣ್ಣನ್ನು ತಿನ್ನಬೇಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ