ಬೆಂಗಳೂರು: ತಿಂದ ಆಹಾರದ ಪ್ರಭಾವವೋ, ಇನ್ನೇನೋ ಕಾರಣದಿಂದಲೋ.. ಟಾಯ್ಲೆಟ್ ನಲ್ಲೇ ಕೂರುವಂತಾದರೆ ಸುಸ್ತೂ ತಡೆಯಲಾಗುವುದಿಲ್ಲ. ಏನು ಮಾಡೋದು ಎಂದು ಚಿಂತೆಯೇ? ಮನೆಯಲ್ಲೇ ಮಾಡಬಹುದಾದ ಮದ್ದುಗಳಿವೆ ನೋಡಿಕೊಳ್ಳಿ.
ದಾಳಿಂಬೆ
ದಾಳಿಂಬೆ ಹೆಚ್ಚು ಸೇವಿಸಿ. ಹಾಗೇ ದಾಳಿಂಬೆ ಸಿಪ್ಪೆಯನ್ನು ಕಶಾಯ ಮಾಡಿ ಕುಡಿದರೂ ಉತ್ತಮ. ದಾಳಿಂಬೆಯಲ್ಲಿರುವ ಕಹಿ ಅಂಶ ಬೇದಿ ತಡೆಗಟ್ಟುವ ಗುಣ ಹೊಂದಿದೆ.
ಜೇನು ತುಪ್ಪ
ಒಂದು ಚಮಚ ಜೇನು ತುಪ್ಪ ಸೇವಿಸಿ. ಜೇನು ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಹದ ಬಿಸಿ ನೀರಿಗೆ ಕಲಸಿಕೊಂಡು ಕುಡಿಯಬಹುದು.
ಸಾಸಿವೆ
ಒಗ್ಗರಣೆಗೆ ಬಳಸುವ ಸಾಸಿವೆ ಕಾಳಿನಲ್ಲೂ ಬೇದಿ ತಡೆಗಟ್ಟುವ ಗುಣವಿದೆ. ಸಾಸಿವೆಯನ್ನು ಕೆಲ ಕಾಲ ನೀರಲ್ಲಿ ನೆನೆಸಿ ಅದರ ನೀರು ಸೇವಿಸಬೇಕು.
ಮಜ್ಜಿಗೆ
ಮಜ್ಜಿಗೆಗೆ ಒಂದು ಚಿಟಿಕೆ ಜೀರಿಗೆ ಮತ್ತು ಉಪ್ಪು ಹಾಕಿಕೊಂಡು ಸೇವಿಸಿ. ಮಜ್ಜಿಗೆ ಜೀರ್ಣಕ್ರಿಯೆ ಸುಗಮಗೊಳಿಸಲು ಉತ್ತಮ ಮನೆ ಔಷಧ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ