Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಕ್ಕಿಯಲ್ಲಿ ಹುಳ ಬಾರದಂತೆ ತಡೆಗಟ್ಟುವ ವಿಧಾನ ಇಲ್ಲಿದೆ ಓದಿ

ಅಕ್ಕಿಯಲ್ಲಿ ಹುಳ ಬಾರದಂತೆ ತಡೆಗಟ್ಟುವ ವಿಧಾನ ಇಲ್ಲಿದೆ ಓದಿ
ಬೆಂಗಳೂರು , ಶುಕ್ರವಾರ, 15 ಡಿಸೆಂಬರ್ 2017 (13:10 IST)
ಬೆಂಗಳೂರು: ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ. ಇದರಿಂದಾಗಿ ಅಕ್ಕಿ ಹಾಳಾಗಿ ಉಪಯೋಗಿಸಲು ಆಗುವುದಿಲ್ಲ.


ಅಕ್ಕಿಯಲ್ಲಿ ಹುಳ ಆಗದಂತೆ ವರ್ಷಗಟ್ಟಲೆ ಸಂಗ್ರಹಿಸಿ ಇಡಬಹುದು. ಹೇಗೆಂದರೆ ಕಹಿಬೇವಿನ ಸೊಪ್ಪನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿಮಾಡಿ ,1 ಕಪ್ ನಷ್ಟು ಪುಡಿಯನ್ನು ತೆಗೆದುಕೊಂಡು ಅದಕ್ಕೆ  ಬೆಳ್ಳುಳ್ಳಿ ಸಿಪ್ಪೆಯ ಪುಡಿ 1ಕಪ್ ಹಾಕಿ, ಮತ್ತೆ ಅದಕ್ಕೆ ಲವಂಗ ಹುರಿದು ಪುಡಿ ಮಾಡಿ ¼ ಕಪ್ ತೆಗೆದುಕೊಂಡು, ಮೂರನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ ಕಲಸಿ (ಹಿಟ್ಟು ಗಟ್ಟಿಯಾಗಿರಲಿ). ನಂತರ ಅದನ್ನು ಚಿಕ್ಕ ಚಿಕ್ಕ ಉಂಡೆಯಾಗಿ ಮಾಡಿ  2 ದಿನ ಬಿಸಿಲಲ್ಲಿ ಒಣಗಿಸಿ.


ಆಮೇಲೆ ಅದನ್ನು ಒಂದು ತೆಳುವಾದ ಬಟ್ಟೆಯಲ್ಲಿ ಕಟ್ಟಿ ಅಕ್ಕಿ ಡಬ್ಬ ಅಥವಾ ಚೀಲದಲ್ಲಿ ಹಾಕಿಡಿ. ಹೀಗೆ ಮಾಡುವುದರಿಂದ ಅಕ್ಕಿ 2 ವರ್ಷದವರೆಗೂ ಏನು ಆಗುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಂಜೆಗೆ ಸವಿಯಿರಿ ಬಿಸಿ ಬಿಸಿ ಬಟಾಟೆ ಬಜ್ಜಿ