ಬೆಂಗಳೂರು: ಗೊರಕೆ ಹೊಡೆಯುವವರಿಗೆ ಆ ಶಬ್ದ ಕಿರಿಕಿರಿ ಮಾಡಲ್ಲ ಆದರೆ ಪಕ್ಕದಲ್ಲಿ ಮಲಗಿರುವವರಿಗೆ ಮಾತ್ರ ತುಂಬಾನೆ ಕಿರಿಕಿರಿ, ಹಿಂಸೆಯಾಗಿ ನಿದ್ರೆ ಬರುವುದಿಲ್ಲ. ನಾವು ಮಲಗಿದ್ದಾಗ ಶ್ವಾಸವು ಸರಿಯಾಗಿ ದೊರಕದೆ ,ಗಟ್ಟಿಯಾಗಿ ಶ್ವಾಸವನ್ನು ತೆಗೆದುಕೊಳ್ಳುವುದರಿಂದ ವೋಕಲ್ ಕಾರ್ಡ್ಸ ಹೆಚ್ಚಾಗಿ ವೈಬ್ರೆಟ್ ಆಗಿ ಧ್ವನಿ ಹೆಚ್ಚಾಗಿ ಬರುತ್ತದೆ. ಇದಕ್ಕೆ ಗೊರಕೆ ಎನ್ನುವುದು.
ಗೊರಕೆ ಒಂದು ದೊಡ್ಡ ಸಮಸ್ಯೆ ಅಲ್ಲ ಅದನ್ನು ಸರಳ ಮನೆಮದ್ದಿನಿಂದ ನಿವಾರಿಸಿಕೊಳ್ಳಬಹುದು.ಆದರೆ ಈ ಮನೆಮದ್ದುಗಳನ್ನು ಒಂದು ತಿಂಗಳು ಮಾಡಬೇಕು. ಹಾಗೆ ಇದನ್ನು ಊಟದ ನಂತರ, ಮಲಗುವ ಮೊದಲು ಸೇವಿಸಬೇಕು.1ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ 1ಚಮಚ ಜೇನುತುಪ್ಪ, 1ಚಮಚ ಅರಶಿನ ಹಾಕಿ ಮಿಕ್ಸ ಮಾಡಿ ಕುಡಿಯುವುದರಿಂದ ಗೊರಕೆ ಕಡಿಮೆಯಾಗುತ್ತದೆ.
ಹಾಗೆ 1 ಗ್ಲಾಸ್ ಬಿಸಿ ಹಾಲಿಗೆ 1ಚಮಚ ಅರಶಿನ ಪುಡಿ ಹಾಕಿ ಕುಡಿಯುವುದರಿಂದಲೂ ಕೂಡ ಗೊರಕೆ ಕಡಿಮೆಯಾಗುತ್ತದೆ. 1ಗ್ಲಾಸ್ ತುಂಬಾ ಬಿಸಿ ಇರುವ ನೀರಿಗೆ 10 ಪುದೀನ ಎಲೆ ಹಾಕಿ ಇಡಿ.ನಂತರ ಅದು ಉಗುರು ಬೆಚ್ಚಗಾದ ಮೇಲೆ ಎಲೆ ತೆಗೆದು 1ಚಮಚ ಜೇನುತುಪ್ಪ ಮಿಕ್ಸ ಮಾಡಿ ಕುಡಿಯಿರಿ. ಆಗ ಸಹ ಗೊರಕೆ ಕಡಿಮೆಯಾಗುತ್ತದೆ. ಹಾಗೆ 1ಗ್ಲಾಸ್ ಬಿಸಿ ನೀರಿಗೆ 1/2ಚಮಚ ಏಲಕ್ಕಿ ಪುಡಿ ಹಾಕಿ ಮಿಕ್ಸಮಾಡಿ ಕುಡಿಯುವುದರಿಂದ ಕೂಡ ಗೊರಕೆ ಹೊಡೆಯುವುದು ನಿಲ್ಲುತ್ತದೆ. ಕೊನೆಯದಾಗಿ ತುಂಬಾ ಬಿಸಿ ಇರುವ ನೀರಿಗೆ 3 ರಿಂದ 4 ಹನಿ ನೀಲಗಿರಿ ತೈಲ ಹಾಕಿ ಆವಿ ತೆಗೆದುಕೊಳ್ಳುವುದರಿಂದ ಗೊರಕೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ