ಬೆಂಗಳೂರು: ಇಂದಿನ ಜೀವನಶೈಲಿ ಹಾಗೂ ಆರೋಗ್ಯ, ಹಾಗೂ ಒತ್ತಡದ ಬದುಕಿನಿಂದ ಮಧುಮೇಹವು ಬೇಗನೇ ದೇಹವನನು ಆವರಿಸುತ್ತದೆ. ಹಾರ್ಮೋನ್ ಇನ್ಸುಲಿನ್ ಅಸಮತೋಲನದಿಂದ ಇದು ಕಾಣಿಸಿಕೊಳ್ಳುತ್ತದೆ. ಅತಿಯಾದ ಬಾಯಾರಿಕೆ, ಹಸಿವು, ದೃಷ್ಟಿ ಮಂದತೆ, ಗಾಯಗಳು, ನಿತ್ರಾಣ ಇತ್ಯಾದಿಗಳೆಲ್ಲ ಈ ರೋಗದ ಲಕ್ಷಣ. ಮಧುಮೇಹದ ನಿಯಂತ್ರಣಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.
* ಬೆಟ್ಟದ ನೆಲ್ಲಿ ಕಾಯಿಯ ಜ್ಯೂಸ್ ಕುಡಿಯುವುದು ಉತ್ತಮ.
* ಸಕ್ಕರೆಗೆ ಪರ್ಯಾಯವಾಗಿ ಜೇನಿನ ಬಳಕೆ ಮಾಡಿಕೊಳ್ಳಿ.
* ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.
* ಖಾಲಿ ಹೊಟ್ಟೆಯಲ್ಲಿ ಹಾಗಲ ಕಾಯಿ ಜ್ಯೂಸ್ ಅಥವಾ ಹುರಿದ ಹಾಗಲಕಾಯಿ ಸೇವಿಸಬಹುದು.
* 1/4 ಚಮಚ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಿಗ್ಗೆ ನೀರಿನ ಸಮೇತ ಮೆಂತ್ಯವನ್ನು ತೆಗೆದುಕೊಳ್ಳಬೇಕು.
* ನೇರಳೆ ಹಣ್ಣಿನ ಬೀಜವನ್ನು ಒಣಗಿಸಿ, ಪುಡಿ ಮಾಡಿ ದಿನಕ್ಕೆ 2 ಬಾರಿ ತಿನ್ನಬೇಕು.
* ಪ್ರತಿ ದಿನ ಶುಂಠಿಯನ್ನು ಆಹಾರದಲ್ಲಿ ಸೇವಿಸಬೇಕು.
* ಚಕ್ಕೆ,ಬೆಳ್ಳುಳ್ಳಿ,ಅರಿಶಿನ ಬಳಕೆ ಆಹಾರದಲ್ಲಿ ಹೆಚ್ಚಿರಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ