ಬೆಂಗಳೂರು : ಸಿಬ್ಬಿನ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಅದು ಒಂದು ಚರ್ಮ ಸಂಬಂಧಿ ರೋಗ. ಇದರಿಂದ ಯಾವುದೇ ತೊಂದರೆಯಾಗದಿದ್ದರೂ ಅದು ನೋಡಲು ಮಾತ್ರ ತುಂಬಾ ಅಸಹ್ಯವಾಗಿ ಕಾಣುತ್ತದೆ. ಇದು ದೇಹದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತದೆ. ಇದು ಫಂಗಸ್ ನಿಂದ ಉಂಟಾಗುವ ರೋಗ. ಇದು ಕಪ್ಪು ಹಾಗು ಬಿಳಿ ಎರಡು ಬಣ್ಣಗಳಲ್ಲಿ ಕಂಡುಬರುತ್ತದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದಕ್ಕೆ ಮನೆಯಲ್ಲಿಯೇ ಔಷಧಿಗಳನ್ನು ಮಾಡಿ ಬಳಸಿ ಅದನ್ನು ನಿವಾರಿಸಬಹುದು.
ಕಕ್ಕೆ ಗಿಡದ ಎಲೆಯ ಚಿಗುರನ್ನು ಮಜ್ಜಿಗೆ ಜೊತೆ ಅರೆದು ಸಿಬ್ಬ ಇರುವ ಕಡೆಯೆಲ್ಲಾ ಹಚ್ಚಿದರೆ ಇದು ನಿವಾರಣೆಯಾಗುತ್ತದೆ. ಒಂದು ವೇಳೆ ಈ ಮನೆಮದ್ದನ್ನು ತಯಾರಿಸಲು ಆಗದಿದ್ದರೆ ಬಜೆ ಹಾಗು ಶ್ರೀಗಂಧವನ್ನು ತೇದಿದಾಗ ಸಿಗುವ ಪೇಸ್ಟ್ ಅನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಇದಕ್ಕೆ ಹಚ್ಚಿ1 ಗಂಟೆ ಬಿಟ್ಟು ಸ್ನಾನ ಮಾಡಿ. ಪ್ರತಿದಿನ ಹೀಗೆ ಮಾಡಿದರೆ ಕ್ರಮೇಣ ಸಿಬ್ಬು ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ