Publish Date: Wed, 17 Jul 2019 (09:16 IST)
Updated Date: Wed, 17 Jul 2019 (09:17 IST)
ಬೆಂಗಳೂರು: ಗಂಡ ಅಥವಾ ಹೆಂಡತಿ ಯಾರಿಗೇ ಆದರೂ ಲೈಂಗಿಕ ನಿರಾಸಕ್ತಿಯಿದ್ದಲ್ಲಿ ದಾಂಪತ್ಯ ಜೀವನದಲ್ಲಿ ಖುಷಿಯಿರದು. ಹೀಗಾಗಿ ಲೈಂಗಿಕ ನಿರಾಸಕ್ತಿಯಿರುವ ಸಂಗಾತಿಯ ಸಹಾಯಕ್ಕೆ ಮುಂದಾಗಬೇಕು.
ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ತೋರದ ಸಂಗಾತಿಯನ್ನು ದೂರುವ ಬದಲು ಆತ/ಆಕೆಯೊಂದಿಗೆ ಮಾತನಾಡಿ ಈ ಕುರಿತು ಚರ್ಚಿಸಬೇಕು. ನಿಮ್ಮ ಮಿಲನದ ಸಂತೋಷ ಹೆಚ್ಚು ಮಾಡಲು ಏನೆಲ್ಲಾ ಮಾಡಬಹುದು ಅದನ್ನೆಲ್ಲಾ ಮಾಡಲು ಇಬ್ಬರೂ ಸಹಮತಕ್ಕೆ ಬರಬೇಕು.
ಅದೂ ಅಲ್ಲದೆ, ಇಬ್ಬರೂ ಜತೆಯಾಗಿ ಬೆಳಗ್ಗೆ ಅಥವಾ ಸಂಜೆ ವಾಕಿಂಗ್ ಹೋಗುವುದು, ಆಟವಾಡುವುದು, ವ್ಯಾಯಾಮ ಮಾಡುವುದು ಇತ್ಯಾದಿ ಒಬ್ಬರಿಗೊಬ್ಬರ ಮೇಲೆ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು. ಇಲ್ಲದೇ ಹೋದಲ್ಲಿ ಸೂಕ್ತ ಸಮಾಲೋಚಕರ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು.