Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆರೋಗ್ಯಕರವಾದ ಕ್ಯಾರೆಟ್ ಕೇಕ್

ಆರೋಗ್ಯಕರವಾದ ಕ್ಯಾರೆಟ್ ಕೇಕ್
ಬೆಂಗಳೂರು , ಸೋಮವಾರ, 29 ಜೂನ್ 2020 (07:53 IST)
ಬೆಂಗಳೂರು : ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಇದನ್ನು ತಿನ್ನುವುದಿಲ್ಲ. ಆದಕಾರಣ ಮಕ್ಕಳಿಗೆ ಕ್ಯಾರೆಟ್ ಕೇಕ್ ತಯಾರಿಸಿ ಕೊಡಿ.

ಬೇಕಾಗುವ ಸಾಮಾಗ್ರಿಗಳು : ತುರಿದ ಕ್ಯಾರೆಟ್ 1 ಕಪ್, ಬಾದಾಮಿ 2 ಚಮಚ, ಒಣದ್ರಾಕ್ಷಿ 2ಚಮಚ, ಮಿಲ್ಕ್ ಮೇಡ್ 400ಗ್ರಾಂ, ಬಟರ್ ಮಿಲ್ಕ್ ½ ಕಪ್, ಆಲಿವ್ ಆಯಿಲ್ ¼ ಕಪ್, ವಿನಿವ್ವಾ ಎಕ್ಸ್ಟಾಕ್ಟ್ 1ಚಮಚ, ವಿನೇಗರ್ 1 ಚಮಚ, ಮೈದಾಹಿಟ್ಟು 2 ಕಪ್, ಅಡುಗೆ ಸೋಡಾ  ½ ಚಮಚ, ಬೇಕಿಂಗ್ ಪೌಡರ್ 1 ಚಮಚ, ಚಕ್ಕೆ ಪುಡಿ ¾ ಚಮಚ, ಉಪ್ಪು 1 ಚಿಟಿಕೆ.

ಮಾಡುವ ವಿಧಾನ : ಪಾತ್ರೆಯಲ್ಲಿ ಮೈದಾಹಿಟ್ಟು, ಅಡುಗೆ ಸೋಡಾ  , ಬೇಕಿಂಗ್ ಪೌಡರ್ , ಚಕ್ಕೆ ಪುಡಿ ,ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಮಿಲ್ಕ್ ಮೇಡ್, ಬಟರ್ ಮಿಲ್ಕ್, ಆಲಿವ್ ಆಯಿಲ್, ವಿನಿವ್ವಾ ಎಕ್ಸ್ಟಾಕ್ಟ್, ವಿನೇಗರ್ , ಕ್ಯಾರೆಟ್, ಬಾದಾಮಿ, ಒಣದ್ರಾಕ್ಷಿ ಹಾಕಿ ಮಿಕ್ಸ್ ಮಾಡಿ ಇದನ್ನು 180 ಡಿಗ್ರಿಯಲ್ಲಿ 30 ನಿಮಿಷ ಒವನ್ ನಲ್ಲಿಟ್ಟು ಬೇಯಿಸಿದರೆ ಕ್ಯಾರೆಟ್ ಕೇಕ್ ರೆಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗರು ಮುಖದಲ್ಲಿ ಮೂಡಿರುವ ಮೊಡವೆಗಳನ್ನು ನಿವಾರಿಸಲು ಇದನ್ನು ಹಚ್ಚಿ