ಸಾವಿರಾರು ವರ್ಷದಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ್ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪೂರಕವಾಗಿರುವ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನೆಲ್ಲ ಪ್ರಯೋಜನಗಳುಂಟು ಗೊತ್ತೇ? ಮುಂದೆ ಓದಿ..
ಪ್ರತಿದಿನ 1 ಸೇಬು ತಿನ್ನಿ, ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿ ದಿನ ಬೆಳ್ಳುಳ್ಳಿ ಬಳಸಿ ಆರೋಗ್ಯವಾಗಿರಿ ಎಂದು ಹೇಳುತ್ತದೆ ಆಯುರ್ವೇದ ಶಾಸ್ತ್ರ.
ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದೇ ಇಲ್ಲ. ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ. ಪ್ರತಿದಿನ ಎರಡು- ಮೂರು ಎಸಳು ಬೆಳ್ಳುಳ್ಳಿ ನುಂಗುವ ಅಭ್ಯಾಸ ಬೆಳೆಸಿಕೊಳ್ಳಿ. ಕಚ್ಚಿ ತಿನ್ನಲಾಗದಿದ್ದರೆ ಅರ್ಧ ಮಾಡಿ ನುಂಗಿ ನೀರು ಕುಡಿಯಿರಿ.
ಹೀಗೆ ಮಾಡುವುದರಿಂದ,
*ರಕ್ತ ಶುದ್ಧಿಯಾಗುತ್ತದೆ.
* ಮುಖದ ಮೇಲಿನ ಮೊಡವೆ, ಕಲೆಗಳು ಮಾಯವಾಗುತ್ತವೆ.
* ಹೃದಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ
*ವಾಯುಬಾಧೆ, ಅಲರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ.
* ಇದು ಹಲ್ಲುನೋವಿಗೆ ಪರಿಣಾಮಕಾರಿ ಔಷಧಿಯಾಗಿ ಕೆಲಸ ಮಾಡುತ್ತದೆ.
*ಉದರ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ.
*ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿ.
*ನರವ್ಯಾಧಿಯನ್ನು ದೂರ ಮಾಡುತ್ತದೆ.
* ಕೊಬ್ಬಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
*ಹಸಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ
*ಉಸಿರಾಟದ ತಂತ್ರವನ್ನು ಗಟ್ಟಿಗೊಳ್ಳಿಸುತ್ತದೆ.
* ಬಿಕ್ಕಳಿಕೆ ತೊಂದರೆಗೆ ಮುಕ್ತಿ
ಆದರೆ ಹೆಚ್ಚು ಬೆವವರುವವರು ಬೆಳ್ಳುಳ್ಳಿಯನ್ನು ಕಡಿಮೆ ಸೇವಿಸಿ. ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಬೆವರು ದುರ್ಗಂಧಮಯವಾಗುತ್ತದೆ.