ಬೆಂಗಳೂರು: ಲೈಂಗಿಕ ಆಸಕ್ತಿ ಮೂಡಲು ಕೆಲವು ಆಹಾರಗಳೂ ಕಾರಣವಾಗುತ್ತದೆ. ಯಾವ ಆಹಾರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ನೋಡೋಣ.
ಜೇನು
ಜೇನು ತುಪ್ಪದಲ್ಲಿರುವ ಬೋರೋನ್ ಎಂಬ ಖನಿಜಾಂಶವಿದ್ದು ರಕ್ತದಲ್ಲಿ ಟೆಸ್ಟಿರೋನ್ ಅಂಶ ಹೆಚ್ಚಿಸುತ್ತದೆ. ಇದರಿಂದ ಪುರುಷ ಮತ್ತು ಮಹಿಳೆಯರಲ್ಲಿ ಲೈಂಗಿಕ ಕಾಮನೆ ಹೆಚ್ಚುತ್ತದೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿರುವ ಅಂಶ ಲೈಂಗಿಕ ಹಾರ್ಮೋನ್ ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ಲೈಂಗಿಕಾಸಕ್ತಿ ಹೆಚ್ಚುತ್ತದೆ.
ಚಾಕಲೇಟ್
ಚಾಕಲೇಟ್ ಮಕ್ಕಳಿಗೆ ಮಾತ್ರವಲ್ಲ. ಚಾಕಲೇಟ್ ತಿನ್ನುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ರಾಸಾಯನಿಕ ನಮ್ಮಲ್ಲಿ ಬೇರೆಯದೇ ಮೂಡ್ ತರುತ್ತದೆ.
ಸಾಲ್ಮನ್ ಫಿಶ್
ಸಾಲ್ಮನ್ ಫಿಶ್ ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಅಧಿಕವಾಗಿದ್ದು, ಸೆಕ್ಸ್ ಹಾರ್ಮೋನ್ ನ್ನು ಚುರುಕುಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆಗೊಳಿಸಿ ಲೈಂಗಿಕಾಸಕ್ತಿ ಕೆರಳಿಸಲು ಹೇಳಿ ಮಾಡಿಸಿದ ಆಹಾರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ