Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಿಸಲು ಗ್ರೀನ್ ಟೀ ಉಪಯುಕ್ತ

ದೇಹದಲ್ಲಿರುವ ಅನಗತ್ಯ ಕೊಬ್ಬು ಕರಗಿಸಲು ಗ್ರೀನ್ ಟೀ ಉಪಯುಕ್ತ
ಬೆಂಗಳೂರು , ಮಂಗಳವಾರ, 24 ಏಪ್ರಿಲ್ 2018 (15:41 IST)
ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ವ್ಯರ್ಥಗಳು ದೂರವಾಗುತ್ತದೆ.ಅದರಿಂದ ಚರ್ಮಕ್ಕೂ ಸಹ ಲಾಭ ಆಗುತ್ತದೆ. 
* ಮೊಡವೆಗಳು ಮತ್ತು ಅದರಿಂದ ಆಗುವ ಮಚ್ಚೆಗಳು ದೂರವಾಗಲು ಮುಖದ ಮೇಲೆ ಗ್ರೀನ್ ಟೀ ಹಚ್ಚಿರಿ. ಈ ರೀತಿ ಮಾಡುವುದರಿಂದ ಈ ಸಮಸ್ಯೆಗೆ ಬೈ ಹೇಳ ಬಹುದಾಗಿದೆ.ಟೀ ದ್ರಾವಣದಲ್ಲಿ ಮೃದುವಾದ ಬಟ್ಟೆಯಿಂದ ಅದ್ದಿ ಇಡಿ ಮುಖಕ್ಕೆ ನಿಧಾನವಾಗಿ ಹಚ್ಚಿರಿ. 
 
*ಎರಡು ಟೀ ಸ್ಪೂನ್ ಟೀ ಪುಡಿಯನ್ನು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಅದನ್ನು ಮುಖಕ್ಕೆ ಲೇಪಿಸಿ ಒಂದು ಗಂಟೆ ಬಳಿಕ ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ.
 
*ಚರ್ಮ ತಾಜಾವಾಗಿರಲು ಮೂರು ಚಮಚೆ ಗ್ರೀನ್ ಟೀ ಪುಡಿಗೆ ಸ್ವಲ್ಪ ಮೊಟ್ಟೆಯ ಬಿಳಿಯ ಭಾಗ , ಸ್ವಲ್ಪ ನಿಂಬೆ ರಸ ಮತ್ತು ಜೇನು ಮಿಶ್ರ ಮಾಡಿ ಇದನ್ನು ಮುಖ ಮತ್ತು ಕುತ್ತಿಗೆಗೆ ಲೇಪಿಸಿ ಸ್ವಲ್ಪ ಸಮಯದ ಬಳಿಕ ಸ್ವಚ್ಚಗೊಳಿಸಿ. 
 
*ಜೇನು ಮತ್ತು ಟೀ ಪುಡಿಯ ಮಿಶ್ರಣದಲ್ಲಿ ಮುಖಕ್ಕೆ ನಿಧಾನವಾಗಿ ಮಸಾಜ್ ಮಾಡಿ ಇದರಿಂದ ಸತ್ತ ಮೃತ ಕಣಗಳು ದೂರವಾಗುತ್ತದೆ. 
 
* ತಲೆ ಸ್ನಾನ ಆದ ಬಳಿಕ ಸ್ವಲ್ಪ ಗ್ರೀನ್ ಟೀ ದ್ರಾವಣವನ್ನು ತೆಗೆದುಕೊಂಡು ಕೂದಲನ್ನು ತೊಳೆದರೆ ಕೇಶದ ಆರೋಗ್ಯ ಸುಸ್ಥಿರವಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನೆಣ್ಣೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ..?