ಕೆಲಸದ ಒತ್ತಡ.. ಬದಲಾವಣೆ ಇಲ್ಲದ ಜೀವನ ಶೈಲಿ ಹೀಗೆ ಹಲವು ಕಾರಣಗಳಿಗೆ ಜೀವನದಲ್ಲಿ ನಿರಾಸಕ್ತಿ ಮೂಡುತ್ತೆ. ಅಯ್ಯೋ ತುಂಬಾ ಬೇಜಾರು ನೀವು ಕೇಳೇ ಇರುತ್ತೀರಿ. ಈ ರೀತಿ ಬೇಸರದಿಂದ ಹೊರಬರಲು ಇಲ್ಲಿವೆ ಕೆಲವು ಉಪಯುಕ್ತ ಟಿಪ್ಸ್.
- ಎಲ್ಲವೂ ವಿಫಲವಾದಾಗ ಸಹನೆ ಸಫಲವಾಗುತ್ತೆ ಎಂಬ ಮಾತನ್ನ ಕೇಳೇ ಇರುತ್ತೀರಿ. ತುಂಬಾ ಬೇಸರವಾದಾಗ ಸಮಾಧಾನವಾಗಿ ಕುಳಿತುಕೊಳ್ಳಿ. ಗಟ್ಟಿ ಉಸಿರು ತೆಗೆದುಕೊಂಡು ಸ್ವಲ್ಪ ಸಮಯ ಬಿಟ್ಟು ಚಟುವಟಿಕೆಗೆ ಮುಂದಾಗಿ. ಹುಮ್ಮಸ್ಸು ಬಂದೇ ಬರುತ್ತದೆ.
- ಹಳೆಯ, ಆತ್ಮೀಯ ಗೆಳೆಯರನ್ನ ಸಂಪರ್ಕಿಸಿ ಅವರ ಜೊತೆ ಸಮಯ ಕಳೆಯಿರಿ. ಇದರಿಂದ ನಿಮಗೆ ಹೊಸತನ ಸಿಗುತ್ತದೆ
- ಒಂದೇ ಟೈಮ್ ಟೇಬಲ್`ನಲ್ಲಿ ದಿನವೂ ಕೆಲಸ ಮಾಡುವುದನ್ನ ಬಿಟ್ಟು, ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.
- ಬೇಜವಾಬ್ದಾರಿಯಿಂದ ವರ್ತಿಸುವವರ ಸಂಗ ತೊರೆಯಿರಿ. ಸೃಜನಶೀಲ, ಸ್ಫೂರ್ತಿ ತುಂಬುವ ವ್ಯಕ್ತಿಗಳ ಸಂಗ ರೂಢಿಸಿಕೊಳ್ಳಿ.
- ಕ್ರೀಡೆಯಲ್ಲಿ ಅಸಕ್ತಿ ಇದ್ದರೆ ಸ್ವಲ್ಪ ಸಮಯ ಮೈದಾನದಲ್ಲಿ ಕಳೆಯಿರಿ, ನೆಚ್ಚಿನ ವಿಷಯ ಪುಸ್ತಕವನ್ನ ಓದಿ.
- ವಾರ ಅಥವಾ ತಿಂಗಳಿಗೊಮ್ಮೆ ಹೊರ ಪ್ರದೇಶಕ್ಕೆ ಭೇಟಿ ನೀಡಿ, ಹೊಸ ಜನರ ಜೊತೆ ಬೆರೆಯಿರಿ.