Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಂದರ ಹೊಳೆಯುವ ಮುಖಕ್ಕಾಗಿ ಬಳಸಿ ನೋಡಿ ಈ 5 ಕಡಲೆ ಹಿಟ್ಟಿನ ಫೇಸ್‌ಪ್ಯಾಕ್..!!

ಸುಂದರ ಹೊಳೆಯುವ ಮುಖಕ್ಕಾಗಿ ಬಳಸಿ ನೋಡಿ ಈ 5 ಕಡಲೆ ಹಿಟ್ಟಿನ ಫೇಸ್‌ಪ್ಯಾಕ್..!!
ಬೆಂಗಳೂರು , ಗುರುವಾರ, 23 ಆಗಸ್ಟ್ 2018 (15:11 IST)
ಕಡಲೆಯಿಂದ ತಯಾರಿಸಲಾಗುವ ಕಡಲೆ ಹಿಟ್ಟು ಸೌಂದರ್ಯಕ್ಕೆ ಹಲವಾರು ರೀತಿಯಲ್ಲಿ ಉಪಯುಕ್ತವಾಗಿದೆ. ಕಡಲೆ ಹಿಟ್ಟಿನಿಂದ ಮುಖದ ಆರೈಕೆ ಮಾಡುವುದು ಹಿಂದಿನ ಕಾಲದಿಂದಲೂ ಬಳಕೆಯಲ್ಲಿರುವ ವಿಷಯವಾಗಿದೆ. ಇದು ವಯಸ್ಸಾಗದಂತೆ ಕಾಣಲು ಸಹಾಯ ಮಾಡುತ್ತದೆ, ಟ್ಯಾನಿಂಗ್ ತೆಗೆಯುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.
ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಬೆಲೆಯ ಕೆಮಿಕಲ್ ಯುಕ್ತ ಫೇಸ್‌ಪ್ಯಾಕ್ ಬಳಸಿ, ತ್ವಚೆಯನ್ನು ಹಾನಿ ಮಾಡಿಕೊಳ್ಳುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಕಡಲೆ ಹಿಟ್ಟಿನ ಫೇಸ್‌ಪ್ಯಾಕ್ ಮಾಡುವುದು ಹೇಗೆ ಎಂದು ನೋಡೋಣ -
 
* ಹೊಳೆಯುವ ಮುಖಕ್ಕಾಗಿ
 
2 ಚಮಚ ಕಡಲೆ ಹಿಟ್ಟಿಗೆ 1/4 ಚಮಚ ನಿಂಬೆ ಹಣ್ಣಿನ ರಸ ಮತ್ತು 1 ಚಮಚ ಹಾಲಿನ ಕೆನೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.
 
* ಮಾಯಿಶ್ಚರೈಸ ಮಾಡಲು
 
1 ಬಾಳೆಹಣ್ಣನ್ನು ಮ್ಯಾಶ್ ಮಾಡಿ, ಅದರಲ್ಲಿ 1 ಚಮಚ ಕಡಲೆ ಹಿಟ್ಟು ಮತ್ತು 1 ಚಮಚ ಜೇನು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.
 
* ಮೊಡವೆಗಳನ್ನು ಕಡಿಮೆ ಮಾಡಲು
 
1 ಚಮಚ ಕಡಲೆ ಹಿಟ್ಟಿಗೆ 1/4 ಚಮಚ ಅರಿಶಿಣ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಅರಿಶಿಣ ಮುಖದ ಮೇಲಿನ ಬೇಡವಾದ ರೋಮಗಳನ್ನು ಸಹ ಕಡಿಮೆ ಮಾಡುತ್ತದೆ.
 
* ಟ್ಯಾನ್ ಕಡಿಮೆ ಮಾಡಲು
 
2 ಚಮಚ ಕಡಲೆ ಹಿಟ್ಟಿಗೆ, 1 ಚಮಚ ಮ್ಯಾಶ್ ಮಾಡಿದ ಪಪಾಯಾ ಹಣ್ಣು ಮತ್ತು 1/4 ಚಮಚ ಕಿತ್ತಳೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ.
 
* ಎಣ್ಣೆ ತ್ವಚೆಯನ್ನು ಕಡಿಮೆ ಮಾಡಲು
 
1 ಚಮಚ ಕಡಲೆ ಹಿಟ್ಟಿಗೆ 1/4-1/2 ಚಮಚ ರೋಸ್ ವಾಟರ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿ 10-15 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ರೋಸ್ ವಾಟರ್ ನೈಸರ್ಗಿಕ ಕ್ಲೆನ್ಸರ್ ಇದ್ದಂತೆ, ಚರ್ಮವನ್ನು ಸ್ವಚ್ಛಗೊಳಿಸೋದು ಮಾತ್ರವಲ್ಲ, ಕಾಂತಿಯುಕ್ತವಾಗಿ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದ ಈ 6 ಅಂಗಗಳನ್ನು ಯಾವಾಗಲೂ ಸ್ಪರ್ಶಿಸುತ್ತಿದ್ದರೆ ಅಪಾಯ ಖಂಡಿತವಂತೆ