Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿದ್ರಾಹೀನತೆ ಸಮಸ್ಯೆಗೆ ಹೋಗಲಾಡಿಸಲು ಈ ನಿಯಮ ಪಾಲಿಸಿ

ನಿದ್ರಾಹೀನತೆ ಸಮಸ್ಯೆಗೆ ಹೋಗಲಾಡಿಸಲು ಈ ನಿಯಮ ಪಾಲಿಸಿ
ಬೆಂಗಳೂರು , ಶನಿವಾರ, 1 ಜೂನ್ 2019 (06:51 IST)
ಬೆಂಗಳೂರು : ಒತ್ತಡ, ಹಣಕಾಸಿನ ಸಮಸ್ಯೆ ಕಾರಣ ಕೆಲವರಿಗೆ ನಿದ್ರೆಯ ಸಮಸ್ಯೆ ಕಾಡುತ್ತದೆ. ಅದಕ್ಕಾಗಿ  ನಿದ್ದೆ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಪರಿಣಾಮವನ್ನುಂಟುಮಾಡುತ್ತದೆ. ಅದರ ಬದಲು ಈ ಮನೆಮದ್ದನ್ನು ಬಳಸಿ.




ಪ್ರತಿದಿನ ನಿದ್ದೆ ಮಾಡುವುದಕ್ಕೂ ಎರಡು ಗಂಟೆ ಮುನ್ನ ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿ ಮಲಗುವುದರಿಂದ ಒಳ್ಳೆಯ ನಿದ್ದೆ ನಿಮ್ಮದಾಗುತ್ತದೆ, ಮಲಗುವ ಮುನ್ನ ಕಾಲಿನ ಪಾದಗಳಿಗೆ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ 10 ರಿಂದ 20 ನಿಮಿಷ ಮಸಾಜ್ ಮಾಡಿ ನಂತರ ಮಲಗುವುದರಿಂದ ಒತ್ತಡ ನಿವಾರಣೆಯಾಗಿ ದೇಹ ಹಾಗು ಮನಸ್ಸು ಎರಡು ಕೂಡ ಶಾಂತ ರೀತಿಯಲ್ಲಿರುತ್ತದೆ.
ಒಂದು ಗ್ಲಾಸ್ ಬೆಚ್ಚಗಿನ ಹಾಲಿಗೆ ಜೇನುತುಪ್ಪ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಹಾಲು-ಜೇನುತುಪ್ಪದ ಮಿಶ್ರಣ ನಿದ್ದೆ ಬರಲು ಉತ್ತಮ ಸಂಯೋಜನೆ ಆಗಿದೆ. ಹಾಲಿನಲ್ಲಿರುವ ಟ್ರಿಪ್ಟೋಫಾನ್ ಅಮೈನೋ ಆ್ಯಸಿಡ್ ನೈಸರ್ಗಿಕವಾಗಿ ನಿದ್ದೆ ಬರಿಸುವ ಮನೆಮದ್ದಾಗಿ ಕೆಲಸ ಮಾಡುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಯುವಕರಿಗೆ ಈ ಸಮಸ್ಯೆ ಕಾಡುತ್ತದೆ