ಬೆಂಗಳೂರು: ನೀಳ ಕೂದಲುಗಳ ಸುಂದರಿ ಎನಿಸಿಕೊಳ್ಳುವ ಆಸೆಯೇ? ಹಾಗಿದ್ದರೆ ಈ ಕೆಲವು ಟಿಪ್ಸ್ ತಪ್ಪದೇ ಫಾಲೋ ಮಾಡಿ.
ಕೂದಲು ಕತ್ತರಿಸಿ!
ಹೌದು. ಕೂದಲು ಕತ್ತರಿಸಿದರೆ ಉದ್ದ ಬರೋದು ಹೇಗೆ ಎಂದು ಪ್ರಶ್ನಿಸಬಹುದು. ಆದರೆ ಕೂದಲಿಗೆ ಕತ್ತರಿ ಹಾಕಿದಷ್ಟು ಅದು ಹೆಚ್ಚು ಉದ್ದವಾಗಿ ಬೆಳೆಯುತ್ತದೆ ಎನ್ನುವುದನ್ನು ಮರೆಯಬೇಡಿ.
ಕಂಡೀಷನಿಂಗ್
ಪ್ರತೀ ಬಾರಿ ಕೂದಲು ತೊಳೆದುಕೊಂಡ ಮೇಲೆ ಕಂಡೀಷನಿಂಗ್ ಮಾಡಿಕೊಳ್ಳಿ. ಇದರಿಂದ ಸೀಳು ಕೂದಲು ಮಾಯವಾಗುವುದಲ್ಲದೆ, ಕೂದಲಿನ ಬೇರು ಗಟ್ಟಿಯಾಗಿ ಹೆಚ್ಚು ಕೂದಲು ಬೆಳೆಯುತ್ತದೆ.
ಬಿಸಿ ಎಣ್ಣೆ ಹಾಕಿ
ಕೂದಲಿಗೆ ಎಣ್ಣೆ ಹಾಕಿ ಮಸಾಜ್ ಮಾಡುವಾಗ ಇದು ನೆನಪಿರಲಿ. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಬಳಸುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಬ್ರಷ್ ಮಾಡಿ!
ಪ್ರತೀ ರಾತ್ರಿ ಮಲಗುವ ಮೊದಲು ಕೂದಲುಗಳನ್ನು ಬ್ರಷ್ ಮಾಡಿಕೊಳ್ಳಿ. ಮೃದುವಾದ ಬ್ರಷ್ ಬಳಸಿ ಕೂದಲುಗಳನ್ನು ಬಾಚಿಕೊಳ್ಳುವುದರಿಂದ ಬೇರುಗಳಿಗೆ ಚೆನ್ನಾಗಿ ರಕ್ತ ಸಂಚಾರವಾಗಿ ಕೂದಲು ಬೆಳವಣಿಗೆಗೆ ಸಹಕರಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.