Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕ್ಷಣ ಮಾತ್ರದಲ್ಲಿ ಒತ್ತಡ ನಿವಾರಣೆ ಮಾಡಲು ಈ ಕ್ರಮಗಳನ್ನು ಅನುಸರಿಸಿ

ಕ್ಷಣ ಮಾತ್ರದಲ್ಲಿ ಒತ್ತಡ ನಿವಾರಣೆ ಮಾಡಲು ಈ ಕ್ರಮಗಳನ್ನು ಅನುಸರಿಸಿ
ಬೆಂಗಳೂರು , ಸೋಮವಾರ, 6 ಸೆಪ್ಟಂಬರ್ 2021 (08:53 IST)
Mental Health:  ಪ್ರಾಣಿಗಳೊಂದಿಗೆ ಮಾತನಾಡುವುದು ಮತ್ತು ಅವುಗಳ ಜೊತೆ ಸಮಯ ಕಳೆಯುವುದು  ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ

 ಒತ್ತಡ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ಕೆಲಸ ಕಾರಣ, ಮನೆಯ ಸಮಸ್ಯೆ ಹೀಗೆ ಒತ್ತಡಕ್ಕೆ ನೂರಾರು ಕಾರಣಗಳು. ಒತ್ತಡದಿಂದ ಹೊರ ಬರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಒಂದು ಗಂಟೆ ಮಸಾಜ್ ಮಾಡಿಕೊಂಡರೆ ಒತ್ತಡ ಸ್ವಲ್ಪ ಕಡಿಮೆಯಾಗುತ್ತದೆ, ಆದರೆ ಮಸಾಜ್  ಮಾಡಲು ಅಥವಾ ಧ್ಯಾನ ಮಾಡಲು ಸಮಯವಿಲ್ಲ ಎಂದರೆ ಚಿಂತೆಯಿಲ್ಲ. ನೀವು ಅತಿ ಕಡಿಮೆ ಸಮಯದಲ್ಲಿ ಒತ್ತಡಕ್ಕೆ ವಿದಾಯ ಬೈ ಹೇಳುವ ಸುಲಭ ಮಾರ್ಗಗಳು ಇಲ್ಲಿದೆ. 
ಈ ವಿಧಾನವನ್ನು 'ವಿಶ್ರಾಂತಿ ಉಸಿರಾಟ' ಎಂದೂ ಕರೆಯುತ್ತಾರೆ, 4-7-8 ಈ ಉಸಿರಾಟದ ತಂತ್ರವು ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ನೆಮ್ಮದಿಯಿಂದ ನಿದ್ರಿಸಲು ಸಹಾಯ ಮಾಡುತ್ತದೆ. ನೀವು ಈ ಉಸಿರಾಟದ ಮಾದರಿಯನ್ನು ಅಭ್ಯಾಸ ಮಾಡುವ ಮೊದಲು, ಆರಾಮದಾಯಕ ಕುಳಿತುಕೊಳ್ಳಿ. ನಿಮ್ಮ ನಾಲಿಗೆಯ ತುದಿಯನ್ನು ನಿಮ್ಮ ಮುಂಭಾಗದ ಹಲ್ಲುಗಳ ಹಿಂದೆ ಇರಿಸಿ ಮತ್ತು ಉಸಿರಾಟದ ಮೇಲೆ ಕೇಂದ್ರೀಕರಿಸಿ.  - ಉಸಿರಾಡುವ ಮೂಲಕ ನಿಮ್ಮ ಶ್ವಾಸಕೋಶವನ್ನು ಖಾಲಿ ಮಾಡಿ ನಾಲ್ಕು ಸೆಕೆಂಡುಗಳ ಕಾಲ ಉಸಿರಾಡಿ-ನಿಮ್ಮ ಉಸಿರನ್ನು ಏಳು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ-ಎಂಟು ಸೆಕೆಂಡುಗಳ ಕಾಲ ಬಾಯಿಯ ಮೂಲಕ ಉಸಿರನ್ನು ಬಿಡುತ್ತಾ ಶಬ್ದವನ್ನು ಮಾಡಿ ಇದನ್ನೇ ನಾಲ್ಕು ಬಾರಿ ಪುನಾರಾವರ್ತನೆ ಮಾಡಿ.
ಪ್ರೋಗ್ರೇಸಿವಿ ಮಸಲ್ ರಿಲ್ಯಾಕ್ಸೇಷನ್ ಅಥವಾ PMR ಒಟ್ಟಾರೆ ದೇಹದ ಒತ್ತಡ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾದ ತಂತ್ರವಾಗಿದೆ. ಈ ತಂತ್ರ ನಿಮ್ಮ ದೇಹದ ಎಲ್ಲಾ ಪ್ರಮುಖ ಸ್ನಾಯುಗಳನ್ನು ಕ್ರಮೇಣವಾಗಿ ಬಿಗಿಗೊಳಿಸುವುದು ಮತ್ತು ವಿಶ್ರಾಂತಿ ಮಾಡುವ ಮೂಲಕ ಮಾಡಬೇಕು.
ವಾಕ್ ಮಾಡಿ
webdunia

ಒತ್ತಡ ನಿವಾರಣೆ ಮಾಡಲು ಉತ್ತರ ಮಾರ್ಗ ಎಂದರೆ ವಾಕ್ ಮಾಡುವುದು. ಮನೆಯಲ್ಲಿ ವಾಕ್ ಮಾಡುವುದಕ್ಕಿಂತ ಹೊರಗಡೆ ವಾಕ್ ಮಾಡುವುದು ಉತ್ತಮ. ನೀವು ಸ್ಥಳ ಬದಲಾವಣೆ ಮಾಡವುದು ಇನ್ನು ಒಳ್ಳೆಯ ಫಲಿತಾಂಶ ನೀಡುತ್ತದೆ. ನಿಮಗೆ ಒಂದೇ ಸ್ಥಳದಲ್ಲಿ ಇದ್ದರೆ ಇನ್ನು ಒತ್ತಡ ಹೆಚ್ಚಾಗುತ್ತದೆ. ನಿಮಗೆ ಇಷ್ಟವಾಗುವ ಸ್ಥಳಕ್ಕೆ ಹೋಗಿ, ದೂರದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿದ್ದರೆ, ಮನೆಯ ಹತ್ತಿರವಿರುವ ದೇವಸ್ಥಾನ, ಪಾರ್ಕ್, ಗೆಳಯರ ಮನೆಗೆ ಹೋಗುವುದು ನಿಮಗೆ ನೆಮ್ಮದಿ ನೀಡುತ್ತದೆ.
ಒತ್ತಡವನ್ನು ನಿವಾರಣೆ  ಮಾಡಲು ಇನ್ನೊಂದು ಉತ್ತಮ ಮಾರ್ಗ ಎಂದರೆ ನೀವು ಮಾಡುತ್ತಿರುವ ಕೆಲಸವನ್ನು ಸ್ವಲ್ಪ ಸಮಯದ ಕಾಲ ಬದಲಾಯಿಸಿ. ನೀವು ಸಮಸ್ಯೆಯ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇನ್ನು ಸಮಸ್ಯೆ ಹೆಚ್ಚಾಗುತ್ತದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಸಹ ಬೀರುತ್ತದೆ. ಅದಕ್ಕೆ ನೀವು ಥ್ರಿಲ್ಲರ್ ಕಥೆಗಳನ್ನ ಓದುವ ಮೂಲಕ ಮನಸ್ಸನ್ನು ರಿಫ್ರೆಶ್ ಮಾಡಿ ಅಥವಾ ಹಾಸ್ಯ ಕಾರ್ಯಕ್ರಮ ಅಥವಾ ಚಲನಚಿತ್ರವನ್ನು ನೋಡಿ. ನೀವು ಸಂತೋಷದ ಕ್ಷಣಗಳನ್ನು ಆನಂದಿಸಿ. ಅಲ್ಲದೇ ನೀವು ಇಷ್ಟಪಡುವಂತಹ ಸೃಜನಶೀಲ ಕೆಲಸವನ್ನು ಮಾಡುವಲ್ಲಿ  ನಿರತರಾಗಿ. ಪೇಟಿಂಗ್ ಮಾಡಿ, ಡ್ಯಾನ್ಸ್ ಮಾಡಿ, ಹಾಡು ಹೇಳಿ ಹೀಗೆ ಹಲವಾರು ಕಾರ್ಯಗಳನ್ನು ಮಾಡಿ ನಿಮ್ಮನ್ನ ಬೇರೆ ಕೆಲಸಗಳಲ್ಲಿ ಬ್ಯೂಸಿಯಾಗಿ. ಆಗ ನಿಮಗೆ ಒತ್ತಡದಿಂದ ಮುಕ್ತಿ ಸಿಗುತ್ತದೆ.
ಪ್ರಾಣಿಗಳೊಂದಿಗೆ ಮಾತನಾಡುವುದು ಮತ್ತು ಅವುಗಳ ಜೊತೆ ಸಮಯ ಕಳೆಯುವುದು  ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ನಾಯಿಗಳು ಅಥವಾ ಬೆಕ್ಕುಗಳಂತಹ ಸಾಕುಪ್ರಾಣಿಗಳೊಂದಿಗೆ ಆಟವಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಅಲ್ಲದೇ  ಇದು ನಿಮ್ಮ  ಒಂಟಿತನದ ಭಾವನೆಯನ್ನು ಕಡಿಮೆ ಮಾಡಬಹುದು. ನೀವು ಸಾಕುಪ್ರಾಣಿಗಳನ್ನು ಹೊಂದಿಲ್ಲದಿದ್ದರೆ, ನಿಮ್ಮ ಪ್ರದೇಶದಲ್ಲಿರುವ ನಾಯಿಗಳಿಗೆ ಆಹಾರ ನೀಡಲು ಪ್ರಯತ್ನಿಸಿ ಅಥವಾ ಸ್ನೇಹಿತರ ಮನೆಯ ಪ್ರಾಣಿಗಳಿಗಳೊಂದಿಗೆ ಸಮಯ ಕಳೆಯಿರಿ. ಇದು ನಿಮಗೆ ಒತ್ತಡದಿಂದ ಹೊರ ಬರಲು ಸಹಾಯ ಮಾಡುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜೀರ್ಣಕ್ರಿಯೆ ಸಮಸ್ಯೆಯಿದ್ದಲ್ಲಿ ಈ ಪದಾರ್ಥಗಳನ್ನು ಬಳಸಿ ನೋಡಿ