ಬೆಂಗಳೂರು: ಲವಂಗ ನಮ್ಮ ಹಿಂದಿನ ಕಾಲದಿಂದಲೂ ಬಳಕೆಯಾಗುತ್ತಿರುವ ಸುಗಂಧ ದ್ರವ್ಯ. ಅಡುಗೆಯಲ್ಲಿ ಬಳಕೆಯಾಗುವ ಲವಂಗ ಹಲವು ಮನೆ ಮದ್ದಿನಲ್ಲೂ ಉಪಯುಕ್ತ. ಇದರ ಐದು ಆರೋಗ್ಯಕರ ಉಪಯೋಗಗಳು ಯಾವುವು ನೋಡಿಕೊಳ್ಳಿ.
ಟೂತ್ ಪೇಸ್ಟ್
ನಿಮ್ಮ ಟೂತ್ ಪೇಸ್ಟ್ ನಲ್ಲಿ ಲವಂಗ ಇದೆಯೇ? ಹೌದು. ನಾವು ಬಳಸುವ ಹೆಚ್ಚಿನ ಟೂತ್ ಪೇಸ್ಟ್ ನಲ್ಲಿ ಲವಂಗ ಬಳಕೆಯಾಗುತ್ತದೆ. ಯಾಕೆಂದರೆ ಇದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲು ನೋವಾದಾಗ ಲವಂಗದ ಕಣವನ್ನು ನೋವಿರುವ ಜಾಗಕ್ಕೆ ಇಟ್ಟುಕೊಂಡು ನೋವು ಉಪಶಮನವಾಗುತ್ತದೆ.
ವಾಕರಿಕೆ
ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.
ಶೀತ
ಸಾಮಾನ್ಯ ಶೀತಕ್ಕೆ ವೈದ್ಯರ ಬಳಿ ಹೋಗಬೇಕಾಗಿಲ್ಲ. ಹದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಸಾಕು.
ಒತ್ತಡ
ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿ.
ಕೆಮ್ಮು
ಕೆಲವು ಲವಂಗದ ತುಂಡನ್ನು ಬಾಯಿಗೆ ಹಾಕಿ ಜಗಿಯುವುದರಿಂದ ಗಂಟಲು ಬಿಟ್ಟುಕೊಂಡು ಬಿಡದೇ ಕಾಡುವ ಕೆಮ್ಮು ಕಡಿಮೆಯಾಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ