Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಚ್ಚಚ್ಚು ಬೆಲ್ಲದ ಅಚ್ಚು.. ತಿಂದು ನೋಡಿ!

ಅಚ್ಚಚ್ಚು ಬೆಲ್ಲದ ಅಚ್ಚು.. ತಿಂದು ನೋಡಿ!
Bangalore , ಶುಕ್ರವಾರ, 3 ಫೆಬ್ರವರಿ 2017 (10:58 IST)
ಬೆಂಗಳೂರು: ಹಿಂದಿನ ಕಾಲದಲ್ಲಿ ಬಾಯಾರಿಕೆಯಾದರೆ ನೀರಿನ ಜತೆಗೆ ಬೆಲ್ಲ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದರು. ಅದು ಕೇವಲ ಹವ್ಯಾಸವಷ್ಟೇ ಅಲ್ಲ. ಅದರ ಹಿಂದೆ ಆರೋಗ್ಯದ ಗುಟ್ಟೂ ಇದೆ. ಬೆಲ್ಲ ತಿನ್ನುವುದರ ಉಪಯೋಗಗಳು ಏನೆಂದು ನೋಡೋಣ.

 
ಬೆಲ್ಲದಲ್ಲಿ ಕಬ್ಬಿಣದಂಶ ಜಾಸ್ತಿ. ಬೆಲ್ಲ ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುವುದಲ್ಲದೆ, ಮಲ ವಿಸರ್ಜನೆ ಸುಗಮವಾಗುವುದು. ಅಲ್ಲದೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರ ಹಾಕುವ ಗುಣ ಹೊಂದಿದೆ. ಅಲ್ಲದೆ ರಕ್ತ ಶುದ್ದೀಕರಿಸುವ ಗುಣವೂ ಇದಕ್ಕಿದೆ. ಅಲ್ಲದೆ ಕೀಲು ನೋವಿನಿಂದ ಬಳಲುತ್ತಿರುವವರಿಗೂ ಉತ್ತಮ.

ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಖನಿಜಾಂಶಗಳು ಹೆಚ್ಚಿದ್ದು ರೋಗ ನಿರೋಧಕ ಶಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಇದರಿಂದಾಗಿ ನಮಗೆ ಆಗಾಗ ಬರುವ ಶೀತ, ಕೆಮ್ಮಿನಂತಹ ಸಾಮಾನ್ಯ ರೋಗಗಳನ್ನು ತಡೆಗಟ್ಟುತ್ತದೆ.

ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಿರುವುದರಿಂದ ರಕ್ತ ಹೀನತೆಯನ್ನು ತಡೆಗಟ್ಟುತ್ತದೆ. ಕೆಂಪು ರಕ್ತ ಕಣಗಳು ಸಹಜವಾಗಿ ಅಭಿವೃದ್ಧಿಯಾಗಲು ಸಹಕಾರಿ. ಬೆಲ್ಲ ತಿನ್ನುವುದರಿಂದ ಹೊಟ್ಟೆ ತಂಪಾಗುವುದಲ್ಲದೆ, ದೇಹದ ಉಷ್ಣತೆಯನ್ನೂ ಸಮತೋಲನದಲ್ಲಿಡುತ್ತದೆ.

ಉಸಿರಾಟದ ತೊಂದರೆ ಇರುವವರು, ತೂಕ ಕಳೆದುಕೊಳ್ಳಲು ಬಯಸುವವರು ಬೆಲ್ಲ ಚೆನ್ನಾಗಿ ತಿನ್ನಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇದನ್ನು ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗದು. ಮತ್ತು ಶಕ್ತಿ ವರ್ಧಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗಾಯವಾಗಿದೆಯೇ? ಬಾಯಿಗೆ ಸಕ್ರೆ ಹಾಕಿ ಮತ್ತೆ..!