Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣಿನ ದೃಷ್ಟಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಕಣ್ಣಿನ ದೃಷ್ಟಿ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ
ಬೆಂಗಳೂರು , ಶನಿವಾರ, 30 ಡಿಸೆಂಬರ್ 2017 (07:01 IST)
ಬೆಂಗಳೂರು: ಈಗ  ಹೆಚ್ಚಿನವರಿಗೆ ಕಣ್ಣಿನ ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಎದುರುಗಡೆ ಇರುವ ವ್ಯಕ್ತಿ, ವಸ್ತುಗಳು ಸರಿಯಾಗಿ ಕಾಣಿಸದೆ ಅವರು ತುಂಬಾ ಪರದಾಡಬೇಕಾಗುತ್ತದೆ. ಈಗಲಂತು ಚಿಕ್ಕಮಕ್ಕಳಿಗೆ 10 ವರ್ಷಕ್ಕೆ ಕನ್ನಡಕ ಧರಿಸುವಂತ ಪರಿಸ್ಥಿತಿ ಉಂಟಾಗುತ್ತದೆ. ಅತಿಯಾಗಿ ಟಿವಿ, ಮೊಬೈಲ್, ಕಂಪ್ಯೂಟರ್ ಗಳ ಬಳಕೆ ಇದಕ್ಕೆ ಮುಖ್ಯ ಕಾರಣವಾಗುತ್ತದೆ.

 
ಮನೆಮದ್ದಿನಿಂದ ಕಣ್ಣಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಳಗಿನ ಮನೆಮದ್ದನ್ನು ದಿನ ಬಳಸುವುದರಿಂದ  ಕಣ್ಣಿನ ಸಮಸ್ಯೆ ದೂರವಾಗುತ್ತದೆ. ಇವುಗಳನ್ನು ಮೂರು ತಿಂಗಳು ಉಪಯೋಗಿಸಿದರೆ ನಿಮ್ಮ ಕಣ್ಣಿಗೆ ಕನ್ನಡಕದ ಅವಶ್ಯಕತೆ ಇರುವುದಿಲ್ಲ.

 
ಒಂದೇ ಪ್ರಮಾಣದಲ್ಲಿ ಬಾದಾಮಿ, ಸೊಂಪು, ಕಲ್ಲುಸಕ್ಕರೆ ತೆಗೆದುಕೊಳ್ಳಿ.ಮೊದಲಿಗೆ ಬಾದಾಮಿಯನ್ನು ನೆನೆಸಿಡಿ. ನಂತರ ಅದರ ಸಿಪ್ಪೆ ತೆಗೆದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ನಂತರ ಅದನ್ನು ಮಿಕ್ಸಿಯಲ್ಲಿ ಪುಡಿಮಾಡಿ. ನಂತರ ಸೊಂಪನ್ನುತುಪ್ಪದಲ್ಲಿ ಪ್ರೈಮಾಡಿ ಆಮೇಲೆ ಪುಡಿಮಾಡಿ. ನಂತರ ಕಲ್ಲುಸಕ್ಕರೆಯನ್ನು ಪುಡಿಮಾಡಿ ಎಲ್ಲವನ್ನು ಸೇರಿಸಿ ಒಂದು ಗಾಜಿನ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ. ಇದನ್ನು ಪ್ರತಿದಿನ 2 ಚಮಚದಷ್ಟು ತೆಗೆದು 200ಎಂಎಲ್ ಹಸುವಿನ ಹಾಲಿಗೆ ಮಾತ್ರ ಹಾಕಿ ಕುಡಿಯಿರಿ. ದಿನ 1 ಬಾರಿ ಕುಡಿಯಿರಿ. ಮಕ್ಕಳಿಗಾದರೆ 1ಚಮಚ ಪುಡಿ ಸಾಕು. ಮೂರು ತಿಂಗಳು ಹೀಗೆ ಮಾಡಿದರೆ ಕಣ್ಣಿನ ಸಮಸ್ಯೆ ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ಐದು ಲಕ್ಷಣಗಳಿಂದ ನೀವು ಗರ್ಭಿಣಿಯಾಗಿದ್ದೀರಿ ಎಂದು ಸುಲಭವಾಗಿ ತಿಳಿಯಬಹುದು