Webdunia - Bharat's app for daily news and videos

Install App

ದಾಲ್ಚಿನ್ನಿಯಿಂದ ಮಕ್ಕಳಿಗೆ ಕಾಡುವ ಅನಾರೋಗ್ಯ ಸಮಸ್ಯೆ ನಿವಾರಣೆ

Webdunia
ಮಂಗಳವಾರ, 13 ಫೆಬ್ರವರಿ 2018 (06:54 IST)
ಬೆಂಗಳೂರು: ಮಕ್ಕಳ ಆರೋಗ್ಯ ಆಗಾಗ ಹದಗೆಡುತ್ತಲೇ ಇರುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಆಗಷ್ಟೇ ಪ್ರಗತಿಯನ್ನು ಕಾಣುತ್ತಿರುತ್ತವೆ. ಹಾಗಾಗಿ ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ. ಈ ಸಂದರ್ಭದಲ್ಲಿ ಕೆಲವು ಸೋಂಕುಗಳು ಅವರನ್ನು ಬಾಧಿಸುತ್ತವೆ. ದಾಲ್ಚಿನ್ನಿಯ ಉಪಯೋಗದಿಂದ ಮಕ್ಕಳಲ್ಲಿ ಕಾಡುವ ಕೆಲವು ಅನಾರೋಗ್ಯವನ್ನು ಗುಣಪಡಿಸಬಹುದಂತೆ.


ಮಕ್ಕಳ ರೋಗ ನಿರೋಧಕ ಹೆಚ್ಚಿಸಲು: ಪ್ರತಿದಿನ ಒಂದು ಚಮಚದಷ್ಟು ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿಯ ದ್ರಾವಣವನ್ನು ಚ್ಯವನ್ ಪ್ರಾಶ್ ನಂತೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.


ಶೀತ ಕೆಮ್ಮು ನೆಗಡಿಗೆ ರಾಮಬಾಣ: ಒಂದು ದೊಡ್ಡ ಚಮಚ ಉಗುರುಬೆಚ್ಚನೆಯ ಜೇನಿಗೆ ಕಾಲು ಚಿಕ್ಕಚಮಚ ದಾಲ್ಚಿನ್ನಿಪುಡಿ ಹಾಕಿ ಪ್ರತಿದಿನ ಮೂರು ಬಾರಿ ಕುಡಿಯುವುದರಿಂದ ಶೀತವೂ ಕಡಿಮೆಯಾಗುತ್ತದೆ.


ಫಂಗಸ್ ಸೋಂಕು ನಿವಾರಣೆಗೆ: ತೆಂಗಿನ ಎಣ್ಣೆ ಮತ್ತು ದಾಲ್ಚಿನ್ನಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಮಾಡಿ. -ಮಿಶ್ರಣವನ್ನು ಪೀಡಿತ ಪ್ರದೇಶದಲ್ಲಿ ಅನ್ವಯಿಸಿ. - ದಿನದಲ್ಲಿ ಎರಡು ಬಾರಿ ಈ ಮಿಶ್ರಣವನ್ನು ಹಚ್ಚಿದರೆ ಬಹುಬೇಗ ಗುಣವಾಗುವುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments