Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಣೇಶನ 14 ರೂಪಗಳ ವಿಶೇಷವೇನು ಗೊತ್ತಾ?

ಗಣೇಶನ 14 ರೂಪಗಳ ವಿಶೇಷವೇನು ಗೊತ್ತಾ?
ಬೆಂಗಳೂರು , ಮಂಗಳವಾರ, 16 ಜುಲೈ 2019 (09:20 IST)
ಬೆಂಗಳೂರು : ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮೊದಲು ವಿಘ್ನಗಳು ಎದುರಾಗದಿರಲಿ ಎಂದು ವಿಘ್ನ ವಿನಾಶಕ ಗಣೇಶ್ ನನ್ನು ಪೂಜಿಸುತ್ತಾರೆ. ಹಾಗೇ ಗಣೇಶನನ್ನು14 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಂದೊಂದು ರೂಪವನ್ನು ಪೂಜಿಸಿದರೆ ಬೇರೆ ಬೇರೆ ಫಲ ದೊರಕುತ್ತದೆಯಂತೆ.




*ಹೇರಂಬ ಗಣಪತಿ :ಈತ ಸಿಹಿ ಕಡಬು ,ದಂತ ,ಜಪಮಾಲೆ, ಅಂಕುಶ ,ಪರಶುವನ್ನು ಕೈಯಲ್ಲಿ ಹಿಡಿದಿದ್ದಾನೆ. ಹೇರಂಬ ಗಣಪತಿಯನ್ನು ಪೂಜಿಸುವಾಗ“ ಓಂ ವಕ್ರತುಂಡಾಯ ನಮಃ” ಈ ಮಂತ್ರ ಹೇಳಿಕೊಂಡು ಗಣಪತಿಗೆ ಪೂಜೆ ಸಲ್ಲಿಸಿ, ಇದರಿಂದ ಸಕಲ ಇಷ್ಟಾರ್ಥಗಳು ಈಡೇರುತ್ತವೆ.

*ಹರಿದ್ರ ಗಣಪತಿ: ಹರಿದ್ರಾ ಗಣಪತಿಯ ರೂಪ ಅರಿಶಿನ ಬಣ್ಣ. ಇವನಿಗೆ ನಾಲ್ಕು ಕೈಗಳಿವೆ, ಎಡಗೈಯಲ್ಲಿ ದಂತ ಹಿಡಿದಿದ್ದಾನೆ. ಓಂ ಹುಂ ಗಂ ಗ್ಲೋಂ ಹರಿದ್ರಾ ಗಣಪತಯೇ , ವರ ವರದಾ ಸರ್ವ ಜನ ಹೃದಯಂ ಸ್ಥಂಭಯ ಸ್ಥಂಭಯ ಸ್ವಾಹಾ” ಈ ಮೂಲ ಮಂತ್ರವನ್ನು ಹೇಳಿಕೊಂಡು ಗಣಪತಿಯನ್ನು ಪೂಜಿಸಿದರೆ ದುಷ್ಟ ಶಕ್ತಿಗಳ ನಾಶವಾಗುತ್ತವೆ.

*ಲಕ್ಷ್ಮಿ ಗಣಪತಿ: ಶ್ರೀ ಲಕ್ಷ್ಮೀ ದೇವಿಯನ್ನು ಎಡತೊಡೆಯ ಮೇಲೆ ಕೂರಿಸಿಕೊಂಡಿದ್ದಾರೆ. “ಓಂ ಲಕ್ಷ್ಮೀ ಗಣಪತಯೇ ನಮಃ” ಈ ಮಂತ್ರ ಪಠಣದಿಂದ ಲಕ್ಷ್ಮಿ ಗಣಪನನ್ನು ಪೂಜಿಸಬೇಕು. ಈ ಪೂಜೆಯಿಂದ ಸಂಪತ್ತು, ಐಶ್ವರ್ಯ, ನಿಮಗೆ ಪ್ರಾಪ್ತಿಯಾಗುತ್ತದೆ.

*ತ್ರ್ಯಕ್ಷ ಗಣಪತಿ: ಚಿನ್ನದ ಬಣ್ಣ ಉಳ್ಳವನು. “ಓಂ ಹ್ರಾಂ ಹ್ರೀಂ ಹ್ರೀಂ ಓಂ” ಈ ಮಂತ್ರವನ್ನು ಹೇಳಿದರೆ ನಿಮಗೆ ಜೀವನದ ಎಲ್ಲ ಸುಖಗಳು ಸಿಗುತ್ತವೆ.

*ಗಣೇಶಾನಿ ರೂಪ: ಗಣಪನ ದೇಹ ಮಾತ್ರ ಸ್ತ್ರೀ ರೂಪದಲ್ಲಿದೆ. “ಓಂ ಗಣೇಶಾನ್ಯಯೇ ನಮಃ” ಮಂತ್ರ ಹೇಳಿ ಗಣಪನನ್ನು ಪೂಜಿಸಬೇಕು. ಗಣೇಶಾನಿಯ ಪೂಜೆಯಿಂದ ಸಾಂಸಾರಿಕ ಕಲಹಗಳು ನಿವಾರಣೆಯಾಗುತ್ತವೆ.

*ಉಚ್ಚಿಷ್ಟ ಗಣಪ: ಉಚ್ಚಿಷ್ಟ ಗಣಪತಿಯ ಬಣ್ಣ ಕಪ್ಪು. ಈ ಗಣಪನಿಗೆ 12 ಕೈಗಳು ಇವನ ಕೈಯಲ್ಲಿ ಪುಸ್ತಕ, ದಾಳಿಂಬೆ ಹಣ್ಣು ಹಿಡಿದಿದ್ದಾನೆ. ತೊಡೆಯ ಮೇಲೆ ಸ್ತ್ರೀಶಕ್ತಿ ಕುಳಿತಿದ್ದಾಳೆ. “ಓಂ ಉಚ್ಚಿಷ್ಟ ಗಣಪತಯೇ ಸ್ವಾಹ” ಮಂತ್ರ ಹೇಳಿ ಗಣಪನನ್ನು ಪೂಜಿಸಿದರೆ ಮಾಟ ಮಂತ್ರದ ಪ್ರಯೋಗ ದೂರವಾಗುತ್ತದೆ.

*ದ್ವಿಜ ಗಣಪತಿ: ಗಣಪತಿಗೆ ನಾಲ್ಕು ಮುಖಗಳು, ನಾಲ್ಕು ಕೈಗಳು, ಗಣಪತಿಯ ಕೈಯಲ್ಲಿ ಪುಸ್ತಕ , ಜಪಮಾಲೆ ಇದೆ, ದಂಡ ಹಾಗೂ ಕಮಂಡಲ ಹಿಡಿದಿದ್ದಾನೆ. ದ್ವಿಜ ಗಣಪ ಶ್ವೇತವರ್ಣದವನು.” ಓಂ ಗಂ ಗಣಪತಯೇ ನಮಃ” ಇದು ದ್ವಿಜ ಗಣಪತಿಯ ಮೂಲ ಮಂತ್ರ.ಈ ಮೂಲ ಮಂತ್ರ ಹೇಳಿಕೊಂಡು ದ್ವಿಜ ಗಣಪನನ್ನು ಪೂಜಿಸಿದರೆ ವಿಶೇಷ ಫಲ.

*ದುರ್ಗಾ ಗಣಪತಿ: ದುರ್ಗ ಗಣಪತಿಗೆ ಎಂಟು ಕೈಗಳು ದೊಡ್ಡ ಶರೀರವನ್ನು ಹೊಂದಿದ್ದಾನೆ. ಇವನ ದೇಹ ಚಿನ್ನದಂತೆ ಹೊಳೆಯುತ್ತಿರುತ್ತದೆ. “ಓಂ ದುರ್ಗಾ ಗಣಪತಯೇ ನಮಃ”ಈ ಮಂತ್ರದಿಂದ ದುರ್ಗ ಗಣಪತಿಯನ್ನು ಪೂಜಿಸಿ, ದುರ್ಗತಿಯನ್ನು ನಾಶ ಮಾಡುವವನು.

*ಯೋಗ ಗಣಪತಿ: ಧ್ಯಾನ ಅವಸ್ಥೆಯಲ್ಲಿರುವ ಗಣಪನ ರೂಪವಿದು. “ಓಂ ಯೋಗ ಗಣಪತಯೇ ನಮಃ” ಈ ದಿವ್ಯ ಮಂತ್ರದಿಂದ ಗಣಪತಿಯನ್ನು ಪೂಜಿಸಿದರೆ ಉತ್ತಮ ಸಾಧನೆಗೆ ದಾರಿ ಸಿಗುತ್ತದೆ.

*ದುಂಡಿ ಗಣಪತಿ: ದುಂಡಿ ಗಣಪತಿಯ ಬಣ್ಣ ಕೆಂಪು, ಪದ್ಮಾಸನದಲ್ಲಿ ಕುಳಿತು ವಿರಾಜಮಾನನಾಗಿದ್ದಾನೆ. “ ಓಂ ದುಂಡಿ ಗಣಪತಯೇ ನಮಃ” ಈ ಮಂತ್ರದಿಂದ ಗಣಪನನ್ನು ಆರಾಧಿಸಿದರೆ ಇಷ್ಟಾರ್ಥಗಳನ್ನು ಅರಿತು ಕರುಣಿಸುವನು.

*ಊರ್ಧ್ವ ಗಣಪತಿ: ಈ ಗಣಪತಿ ಶಕ್ತಿ ದೇವತೆಯನ್ನು ಎಡ ತೊಡೆಯ ಮೇಲೆ ಕುಳ್ಳರಿಸಿಕೊಂಡು ಕಣ್ಣಿನ ದೃಷ್ಟಿ ಮೇಲ್ಮುಖವಾಗಿದೆ. “ಓಂ ನಮೋ ಭಗವತೇ ಏಕ ದಂಷ್ಟ್ರಾಯ, ಹಸ್ತಿ ಮುಖಾಯ ಲಂಬೋಧರಾಯ ಉಚ್ಚಿಷ್ಟ ಮಹಾತ್ಮನೇ ಆಂ ಕ್ರೌo ಹ್ರೀಂ ಗಂ ಘೆ ಘೆ ಸ್ವಾಹ”ಈ ಮಂತ್ರದಿಂದ ಪೂಜಿಸಿದರೆ ಯಶಸ್ಸು ಖಚಿತ.

*ಉದ್ದಂಡ ಗಣಪತಿ: ಕೈಯಲ್ಲಿ ಶಸ್ತ್ರ ಹಿಡಿದು ಉದ್ದಂಡ ಗಣಪತಿಯ ಬಣ್ಣ ಕೆಂಪು, ಈ ಗಣಪನಿಗೆ ಹತ್ತು ಕೈಗಳು, ಕಬ್ಬಿನ ಜಲ್ಲೆಯಿಂದಾದ ಬಿಲ್ಲನ್ನು ಹಿಡಿದಿದ್ದಾನೆ. “ಓಂ ಉದ್ದಂಡ ಗಣಪತಯೇ ನಮಃ” ಈ ಮಂತ್ರದಿಂದ ಗಣಪತಿಯನ್ನು ಪೂಜಿಸಿದರೆ ಶತ್ರುಗಳನ್ನು ನಾಶ ಮಾಡುವವನು ಎಂದರ್ಥ.

*ಸೃಷ್ಟಿ ಗಣಪತಿ: ಈ ಗಣಪತಿ ಚತುರ್ಭುಜ ಉಳ್ಳವನು. “ಓಂ ಸೃಷ್ಟಿ ಗಣಪತಯೇ ನಮಃ” ಈ ಮಂತ್ರದಿಂದ ಸೃಷ್ಟಿ ಗಣಪತಿಯನ್ನು ಪೂಜಿಸಲಾಗುತ್ತದೆ. ಇವನು ಸೃಷ್ಟಿಯ ಗಣಪನಾದ್ದರಿಂದ ಇವನು ಸಂತಾನವಿಲ್ಲದವರಿಗೆ ವಿಶೇಷ ಆಶೀರ್ವಾದ ನೀಡುತ್ತಾನೆ.

*ಸಿಂಹ ಗಣಪತಿ: ಇವನು ಸಿಂಹದ ಮುಖವುಳ್ಳವನು ಮತ್ತು ಸಿಂಹದಂತೆ ದೊಡ್ಡ ಕಣ್ಣುಗಳು, ಚಿಕ್ಕ ಕಿವಿಗಳು, ತಲೆಯಲ್ಲಿ ದಟ್ಟವಾದ ಕೇಶ ಮತ್ತು ಈ ಗಣಪನ ಕೈಯಲ್ಲಿ ಕಲ್ಪವೃಕ್ಷದ ಬಳ್ಳಿ ಹೂವಿನ ಗೊಂಚಲು ಇದೆ. :“ ಓಂ ಸಿಂಹ ಗಣಪತಯೇ ನಮಃ” ಈ ಮಂತ್ರದಿಂದ ಸಿಂಹ ಗಣಪನನ್ನು ಪೂಜಿಸಿ. ರಾಜಕೀಯದಲ್ಲಿ ಹೆಸರು ಮಾಡಬೇಕು ಎನ್ನುವವರು ಸಿಂಹ ಗಣಪತಿಯನ್ನು ಆರಾಧಿಸುತ್ತಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ