ಬೆಂಗಳೂರು : ಮಹಿಳೆಯರು ಋತುಬಂಧಕ್ಕೆ ಒಳಗಾಗುವ ವೇಳೆ ಅಂಡಾಶಯ ಈಸ್ಟ್ರೊಜೆನ್ ಹಾರ್ಮೋನ್ ಉತ್ಪಾದನೆಯನ್ನು ನಿಲ್ಲಿಸುತ್ತದೆ. ಇದರಿಂದ ಅವರಲ್ಲಿ ಶುಷ್ಕತೆ, ಕುಗ್ಗುವಿಕೆ, ಮುಖದಲ್ಲಿ ಸುಕ್ಕುಗಳು ಕಂಡುಬರುತ್ತವೆ. ಈ ಸಮಸ್ಯೆಯನ್ನು ನಿವಾರಿಸಲು ಈ ಹಣ್ಣನ್ನು ಸೇವಿಸಿ.
ಮಾವಿನ ಹಣ್ಣನ್ನು ತಿನ್ನುವುದರಿಂದ ಋತುಬಂಧದ ವೇಳೆ ಕಾಡುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಮಾವು ಈಸ್ಟೋಜೆನ್ ಮಟ್ಟವನ್ನು ಸಾಮಾನ್ಯಗೊಳಿಸಲು ಮತ್ತು ಋತುಬಂಧದ ನಂತರದ ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾರ್ಮೋನ್ ನಿಂದ ಉಂಟಾಗುವ ವಯಸ್ಸಾಗುವಿಕೆಯ ಪರಿಣಾಮವನ್ನು ಕಡಿಮೆ ಮಾಡುತ್ತದೆ.