Publish Date: Mon, 27 Jan 2020 (06:18 IST)
Updated Date: Mon, 27 Jan 2020 (06:19 IST)
ಬೆಂಗಳೂರು : ಹೆಚ್ಚಾಗಿ ವಯಸ್ಸಾದವರಲ್ಲಿ ಕಣ್ಣಿನ ಪೊರೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರಿಗೆ ಕಣ್ಣು ಸರಿಯಾಗಿ ಕಾಣುವುದಿಲ್ಲ. ಕಣ್ಣಿನ ಪೊರೆ ಸಮಸ್ಯೆ ನಿಮ್ಮನ್ನ ಕಾಡಬಾರದಂತಿದ್ದರೆ ಇವುಗಳನ್ನು ಸೇವಿಸಿ.
ಕಣ್ಣಿನ ಪೊರೆ ಸಮಸ್ಯೆಯಿಂದ ದೂರವಿರಲು ಆಹಾರದಲ್ಲಿ ಹೆಚ್ಚು ಪಾಲಕ್ ಸೊಪ್ಪನ್ನು ಸೇವಿಸಿ. ಇದು ಪೆಟಿನಲ್ ಮತ್ತು ಕಣ್ಣಿ ಅಂಗಾಂಶದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದು ಕರೋಟೆನಾಡ್ ಗಳ ಮತ್ತು ವಿಟಮಿನ್ ಎ ಗಳನ್ನು ಒಳಗೊಂಡಿದೆ. ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ.
ನೀವು ಹೆಚ್ಚು ಎಲೆಕೋಸು, ಬೆರಿಹಣ್ಣು, ಬ್ಲ್ಯಾಕ್ ಬೆರಿ ಮತ್ತು ಚೆರಿಗಳು ಹಾಗೂ ಕಣ್ಣಿಗೆ ಉಪಯುಕ್ತವಾದ ವಿಟಮಿನ್ ಎ ಮತ್ತು ಇ ಗಳು ಸಮೃದ್ಧವಾಗಿರುವ ಇತರ ಹಣ್ಣುಗಳನ್ನು ತಿನ್ನಬೇಕು. ಹಾಗೇ ಹಾಲಿನ ಉತ್ಪನ್ನಗಳನ್ನು ಹೆಚ್ಚು ಸೇವಿಸಬೇಡಿ, ಇದು ಕಣ್ಣಿನ ಪೊರೆ ಸಮಸ್ಯೆಗೆ ಕಾರಣವಾಗಿದೆ.