ಬೆಂಗಳೂರು : ಉತ್ತಮ ಆರೋಗ್ಯವನ್ನು ಹೊಂದಲು ಮಾಂಸಹಾರಕ್ಕಿಂತ ಸಸ್ಯ ಆಧಾರಿತ ಆಹಾರವನ್ನು ಸೇವಿಸುವುದು ಉತ್ತಮ. ಇದು ಚಯಾಪಚಯ ಕ್ರಿಯೆ ಹೆಚ್ಚಾಗಲು ಸಹಕರಿಸುತ್ತದೆ. ಮಧುಮೇಹ, ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಹಾಗಾಗಿ ಸಂಸ್ಕರಿಸಿದ ಆಹಾರಗಳಿಗಿಂತ ಈ ಸಸ್ಯ ಆಧಾರಿತ ಆಹಾರಗಳನ್ನು ಸೇವಿಸಿ:
ಸಿಟ್ರಸ್ ಹಣ್ಣುಗಳು, ಬಾಳೆಹಣ್ಣು, ದ್ರಾಕ್ಷಿ, ಅವಕಾಡೋ ಮುಂತಾದ ಹಣ್ಣುಗಳನ್ನು ಸೇವಿಸಿ.
ಕೋಸುಗಡ್ಡೆ, ಕ್ಯಾರೆಟ್, ಟೊಮೆಟೊ, ಕುಂಬಳಕಾಯಿ , ಹೂಕೋಸು, ಬೀಟ್ ರೋಟ್ ಮತ್ತು ಮೆಣಸುಗಳಂತಹ ತರಕಾರಿಗಳನ್ನು ಸೇವಿಸಿ.
ದ್ವಿದಳ ಧಾನ್ಯಗಳು, ಕಡಲೆ, ಫೈಬರ್ ಭರಿತ ಆಹಾರವನ್ನು ಸೇವಿಸಿ.