Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕರಬೂಜ ಹಣ್ಣು ತಿನ್ನಿ ಈ ರೋಗಗಳನ್ನು ನಿವಾರಿಸಿಕೊಳ್ಳಿ.

ಕರಬೂಜ ಹಣ್ಣು ತಿನ್ನಿ ಈ ರೋಗಗಳನ್ನು ನಿವಾರಿಸಿಕೊಳ್ಳಿ.
ಬೆಂಗಳೂರು , ಶುಕ್ರವಾರ, 16 ಮಾರ್ಚ್ 2018 (11:05 IST)
ಬೆಂಗಳೂರು: ಸೆಕೆ ಆರಂಭವಾಗಿಯೇ ಬಿಟ್ಟಿದೆ. ನೀರಿನಂಶ ಧಾರಾಳವಾಗಿ ಇರುವ,  ದೇಹವನ್ನು ಸದಾ ತಂಪಾಗಿ ಇಡುವ ಕರಬೂಜ ಹಣ್ಣಿನ ಜ್ಯೂಸ್‌ ಬಾಯಾರಿಕೆ ನೀಗಿಸುವುದರ ಜತೆಗೆ ದೇಹಕ್ಕೂ ಬಲು ಉತ್ತಮ. ಕರಬೂಜ ಹಣ್ಣಿನಿಂದ ಇನ್ನೂ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ತಿಳಿಸಲಾಗಿದೆ.

*ಕರಬೂಜ ಹಣ್ಣು ಅಧಿಕ ಪ್ರಮಾಣದ ‘ಎ’ ಜೀವಸತ್ವ ಅಧಿಕವಿರುವುದರಿಂದ ಕಣ್ಣಿನ ದೋಷಗಳು ಹಾಗೂ ಇರುಳುಗಣ್ಣುಗಳಿಂದ ಬಾಧೆ ಪಡುತ್ತಿರುವವರು ಇದನ್ನು ಹೆಚ್ಚಾಗಿ ಸೇವಿಸಬೇಕು.

*ಆ್ಯಸಿಡಿಟಿ ಇರುವವರಿಗೂ ಕರಬೂಜ ಹಣ್ಣು ಒಂದು ಅಮೃತದಂತೆ. ಸಾಕಷ್ಟು ಕರಬೂಜ ಹಣ್ಣನ್ನು ತಿನ್ನುವುದರಿಂದ  ನಿವಾರಿಸಿಕೊಳ್ಳಬಹುದು,

*ಈ ಹಣ್ಣಿನಲ್ಲಿ ಕ್ಯಾಲರಿ ಅಂಶ ತೀರಾ ಕಡಿಮೆ ಇರುವುದರಿಂದ ಇದನ್ನು ಸೇವಿಸುವುದರಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.

*ಕೆಲವೊಂದು ಹೃದ್ರೋಗಗಳಿಗೂ ಕರಬೂಜದಿಂದ ಉಪಯೋಗವಿದೆ. ಇದರಲ್ಲಿ ವಿಟಮಿನ್‌ ‘ಸಿ’ ಅಂಶ ಹೇರಳವಾಗಿ ಇರುವ ಕಾರಣ, ಹೃದ್ರೋಗಗಳನ್ನು ದೂರ ಇಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಕರೆ ಸೇವಿಸುತ್ತಿದ್ದೀರಾ…? ಇಲ್ಲಿದೆ ನೋಡಿ ನಿಮಗೊಂದು ಗುಡ್ ನ್ಯೂಸ್!