Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಡಿಮೆ ಸಕ್ಕರೆ ಪ್ರಮಾಣ ಇರುವ ಈ ಹಣ್ಣುಗಳನ್ನು ಸೇವಿಸಿ ಆರೋಗ್ಯವಾಗಿರಿ

ಕಡಿಮೆ ಸಕ್ಕರೆ ಪ್ರಮಾಣ ಇರುವ ಈ  ಹಣ್ಣುಗಳನ್ನು ಸೇವಿಸಿ ಆರೋಗ್ಯವಾಗಿರಿ
ಬೆಂಗಳೂರು , ಶನಿವಾರ, 17 ಫೆಬ್ರವರಿ 2018 (07:21 IST)
ಬೆಂಗಳೂರು : ನಾವು ಕೆಲವೊಮ್ಮೆ ಬೇಡವಾದ ಅನಾರೋಗ್ಯಕರ ಆಹಾರವನ್ನು ಸೇವಿಸುತ್ತೇವೆ. ಸಕ್ಕರೆ ಕಡಿಮೆ ಇರುವ ಹಣ್ಣುಗಳನ್ನು ಸೇವಿಸಿ. ಇದರಿಂದ ನಿಮ್ಮ ಸಕ್ಕರೆಯ ಮಟ್ಟವನ್ನು ಮಿತಿಯಲ್ಲಿ ಇಟ್ಟುಕೊಳ್ಳಬಹುದು.


1. ಸ್ಟ್ರಾಬೆರ್ರಿಗಳು  : ಇವುಗಳ ರುಚಿಯು ಉತ್ತಮ ಜೊತೆಗೆ ಪ್ರತಿ 100 ಗ್ರಾಂ ಹಣ್ಣಿಗೆ ಕೇವಲ 5 ಗ್ರಾಂ ನಷ್ಟು ಮಾತ್ರ ಸಕ್ಕರೆ ಅಂಶವನ್ನು ಇವು ಹೊಂದಿರುತ್ತವೆ. ಇದರ ಜೊತೆಗೆ ಸ್ಟ್ರಾಬೆರ್ರಿಗಳಲ್ಲಿ ನಾರಿನಂಶ, ಖನಿಜಾಂಶ ಮತ್ತು ವಿಟಮಿನ್‌ಗಳು ಸಹ ಹೆಚ್ಚುವರಿಯಾಗಿ ಇರುತ್ತವೆ.


2. ಕಿವಿ ಹಣ್ಣುಗಳು : ತುಂಬಾ ರುಚಿಕರವಾದ ಈ ವಿದೇಶಿ ಹಣ್ಣಿನಲ್ಲಿ, ಕಡಿಮೆ ಸಕ್ಕರೆ ಅಂಶವು ಇರುತ್ತದೆ. ಇದರಿಂದಾಗಿ ಇವುಗಳನ್ನು ಸಕ್ಕರೆ ಅಂಶ ಕಡಿಮೆ ಸೇವಿಸಬೇಕಾದವರು ಸೇವಿಸಬಹುದು. ಪ್ರತಿ ಕಿವಿ ಹಣ್ಣು 6 ಗ್ರಾಂ ಸಕ್ಕರೆಯನ್ನು ಮಾತ್ರ ಹೊಂದಿರುತ್ತವೆ!.


3. ಅವೊಕ್ಯಾಡೊ : ಈ ಹಣ್ಣಿನಲ್ಲಿ ಸ್ವಾಭಾವಿಕವಾಗಿ ಕಡಿಮೆ ಸಕ್ಕರೆ ಅಂಶ ಇರುತ್ತದೆ. ಅವೊಕ್ಯಾಡೊಗಳಲ್ಲಿ ಆರೋಗ್ಯಕರವಾದ ಕೊಬ್ಬುಗಳು ಇರುತ್ತವೆ. ಇದರಲ್ಲಿ ಒಂದು ಗ್ರಾಂ ಮಾತ್ರ ಸಕ್ಕರೆ ಅಂಶ ಇರುತ್ತದೆ.


4. ಕಲ್ಲಂಗಡಿ : ಈ ಹಣ್ಣು ಸಿಹಿಯಾಗಿದ್ದರೂ ಸಹ 100 ಗ್ರಾಂ ಹಣ್ಣಿನಲ್ಲಿ ಕೇವಲ 6 ಗ್ರಾಂ. ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ. ಇದರಲ್ಲಿ ಅಧಿಕವಾಗಿರುವ ನೀರಿನಂಶವು ಕ್ಯಾಲೋರಿಯ ಅಂಶಗಳು ಕಡಿಮೆ ಇರುತ್ತವೆ.


5. ಕಿತ್ತಳೆ : ಒಂದು ಕಿತ್ತಳೆ ಹಣ್ಣಿನಲ್ಲಿ 12 ಗ್ರಾಂ.ನಷ್ಟು ಮಾತ್ರ ಸಕ್ಕರೆ ಅಂಶ ಇರುತ್ತದೆ ಹಾಗೂ ಸಮೃದ್ಧವಾದ ವಿಟಮಿನ್ ಸಿ ಸಹ ಇರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಸ್ ಮಾಡುವುದರಿಂದ ಈ ರೋಗಗಳು ಹರಡುವ ಸಾಧ್ಯತೆ ಇದೆ ಹುಷಾರು!