ಬೆಂಗಳೂರು : ಬೆಳಿಗ್ಗೆ ನಮ್ಮ ಎನರ್ಜಿ ಹೆಚ್ಚಾಗಿದ್ದರೆ ದಿನವಿಡೀ ನಾವು ಖುಷಿಯಾಗಿರುತ್ತೇವೆ. ಹಾಗಾಗಿ ಬೆಳಿಗ್ಗಿನ ವೇಳೆ ಉಪಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸಿ.
ಬೆಳಿಗ್ಗೆ ಎದ್ದು 2 ಗಂಟೆಯೊಳಗೆ ಉಪಹಾರ ಸೇವಿಸಬೇಕು. ಇದರಿಂದ ನಿಮಗೆ ಬೇಕಾಗುವ ಶಕ್ತಿ ಸಿಗುವುದಲ್ಲದೇ ನಿಮ್ಮ ಮೆಟಾಬೋಲಿಸಂ ನ್ನು ಹೆಚ್ಚುಗೊಳಿಸುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಅಂಶವನನ್ನು ಸಮತೋಲನಗೊಳಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.