Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕಾದರೆ ಹೀಗೆ ಮಾಡಿ!

ರಾತ್ರಿ ಚೆನ್ನಾಗಿ ನಿದ್ರೆ ಬರಬೇಕಾದರೆ ಹೀಗೆ ಮಾಡಿ!
ಬೆಂಗಳೂರು , ಮಂಗಳವಾರ, 26 ಡಿಸೆಂಬರ್ 2017 (08:53 IST)
ಬೆಂಗಳೂರು: ರಾತ್ರಿ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ? ನಿದ್ರೆಯಿಲ್ಲದೇ ಹೊರಳಾಡುತ್ತಿದ್ದೀರಾ? ಇದರಿಂದಾಗಿ ನಿಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿರಬಹುದು. ಹಾಗಿದ್ದರೆ ಕೆಲವು ಸಿಂಪಲ್ ಟ್ರಿಕ್ಸ್ ಮಾಡಿ ನೋಡಿ.
 

ಪುಸ್ತಕ ಓದಿ: ರಾತ್ರಿ ನಿದ್ರೆ ಬರುತ್ತಿಲ್ಲವೆಂದಾದರೆ, ನಿಮಗೆ ಇಷ್ಟವಿಲ್ಲದ ಪುಸ್ತಕವೊಂದನ್ನು ತೆಗೆದುಕೊಂಡು ಓದಿ. ಓದುತ್ತಿದ್ದರೆ ತಾನಾಗಿಯೇ ನಿದ್ರೆ ಬರುತ್ತದೆ.

ಹಾಸಿಗೆ ಬದಲಾಯಿಸಿ: ನಿದ್ರಾಹೀನತೆಗೆ ಹಾಸಿಗೆ, ತಲೆದಿಂಬು ಕೂಡಾ ಕಾರಣವಾಗಿರಬಹುದು. ಹಾಗಾಗಿ ಸರಿಯಾಗಿ ನಿದ್ರೆ ಬರಬೇಕೆಂದರೆ ಹಾಸಿಗೆ ಬದಲಾಯಿಸಿ ನೋಡಿ.

ಚೆರ್ರಿ ಜ್ಯೂಸ್: ನಿದ್ರೆ ಬರಲು ಕಷ್ಟವಾಗುತ್ತಿದೆ ಎಂದರೆ ಒಣ ಚೆರಿ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಒಂದೊಂದು ಸಿಪ್ ಕುಡಿಯುತ್ತಿರಿ. ತಾನಾಗಿಯೇ ನಿದ್ರೆ ಆವರಿಸುತ್ತದೆ.

ನಿಂಬೆ ಹಣ್ಣು ಇಡಿ: ನಿಮ್ಮ ಬೆಡ್ ಪಕ್ಕ ನಿಂಬೆ ಹಣ್ಣು ಇಟ್ಟುಕೊಳ್ಳಿ. ಒಂದು ವೇಳೆ, ಅಲರ್ಜಿ, ಶೀತದ ಸಮಸ್ಯೆಯಿಂದಾಗಿ ನಿದ್ರೆ ಬರಲು ಕಷ್ಟವಾದರೆ, ಇದು ಉಪಯೋಗಕ್ಕೆ ಬರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಈರುಳ್ಳಿ ಸಿಪ್ಪೆಯ ಈ ಉಪಯೋಗ ನಿಮಗೆ ನಂಬಲೂ ಸಾಧ್ಯವಿಲ್ಲ!