Webdunia - Bharat's app for daily news and videos

Install App

ಜೀರ್ಣಕ್ರಿಯೆ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ! ಇದನ್ನು ಟ್ರೈ ಮಾಡಿ

Webdunia
ಸೋಮವಾರ, 8 ನವೆಂಬರ್ 2021 (13:40 IST)
ಈಗಿನ ಕಾಲದಲ್ಲಿ ಅಜೀರ್ಣತೆ ಎನ್ನುವುದು ಸಾಕಷ್ಟು ಜನರಿಗೆ ಶಾಪವಾಗಿ ಪರಿಣಮಿಸುತ್ತದೆ. ಯಾವುದಾದರೂ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದ ನಂತರ ಅದು ಹೊಟ್ಟೆಯ ಭಾಗದಲ್ಲಿ, ಅಜೀರ್ಣತೆಗೆ ಕಾರಣವಾಗುತ್ತದೆ.
ಸಾಕಷ್ಟು ಜನರಿಗೆ ಹೊಟ್ಟೆ ಉಬ್ಬರ ಉಂಟಾಗುತ್ತದೆ. ಕೆಲವರಿಗೆ ಎದೆಯುರಿ ಮತ್ತು ಜೀರ್ಣಾಂಗಕ್ಕೆ ಸಂಬಂಧಪಟ್ಟಂತೆ ಇನ್ನೂ ಕೆಲವು ಸಮಸ್ಯೆಗಳು ಕಂಡು ಬಂದು ರಾತ್ರಿಯ ಸಮಯದಲ್ಲಿ ನಿದ್ರೆ ಬರುವುದಿಲ್ಲ.
ಒಂದು ವೇಳೆ ಇಂತಹ ಸಂದರ್ಭ ನಿಮಗೂ ಸಹ ಎದುರಾಗಿದ್ದರೆ, ಇನ್ನು ಮುಂದೆ ಯೋಗ ಮಾಡಲು ಪ್ರಾರಂಭ ಮಾಡಿ. ಇದು ನಿಮ್ಮ ದೇಹವನ್ನು ವಿಷಕಾರಿ ಅಂಶಗಳಿಂದ ಮುಕ್ತವಾಗಿಸಿ, ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳನ್ನು ಶಾಂತಗೊಳಿಸುತ್ತದೆ.
ಇದರಿಂದ ಅಂತರಿಕವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆ ಕೂಡ ಅಭಿವೃದ್ಧಿಯಾಗಲಿದೆ. ಯೋಗ ಅಥವಾ ವ್ಯಾಯಾಮದಿಂದ ನಿಮ್ಮ ದೇಹದಲ್ಲಿ ಉತ್ತಮವಾದ ರಕ್ತಸಂಚಾರ ಕೂಡ ಉಂಟಾಗುವುದರಿಂದ ನಿಮ್ಮ ದೇಹದ ಎಲ್ಲ ಅಂಗಾಂಗಗಳು ನಿಮಗೆ ಸಹಕಾರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭ ಮಾಡುತ್ತವೆ.
ವಜ್ರಾಸನ
ರಾತ್ರಿಯ ಊಟದ ಸಮಯಕ್ಕೆ ಹೇಳಿಮಾಡಿಸಿದ ಯೋಗಾಭ್ಯಾಸ ಎಂದು ಇದನ್ನು ಕರೆಯಬಹುದು. ಏಕೆಂದರೆ ಯೋಗಾ ಭ್ಯಾಸದಲ್ಲಿ ನಿಮ್ಮ ಮೇಲ್ಭಾಗದ ದೇಹ ವಿಸ್ತಾರಗೊಂಡು, ನಿಮ್ಮ ಉಸಿರಾಟ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುವುದು ಮಾತ್ರವಲ್ಲದೆ ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳು ಶಾಂತವಾಗುತ್ತದೆ ಮತ್ತು ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಲು ಸಹಾಯವಾಗುತ್ತದೆ.
ಗೋಮುಖಾಸನ
•ಹೆಸರೇ ಹೇಳುವಂತೆ ಇದನ್ನು ಹಸುವಿನ ಭಂಗಿ ಎಂದು ಕರೆಯಬಹುದು.
•ಈ ಯೋಗಾಭ್ಯಾಸವನ್ನು ಮಾಡುವುದರಿಂದ ನಿಮ್ಮ ಬೆನ್ನುಹುರಿ ನೇರವಾಗಿ ವಿಸ್ತಾರವಾಗುತ್ತದೆ ಮತ್ತು ನಿಮ್ಮ ಹೊಟ್ಟೆಯ ಭಾಗದ ಮಾಂಸಖಂಡಗಳು ಶಾಂತ ಗೊಳ್ಳಲು ನೆರವಾಗುತ್ತದೆ ಇದರಿಂದ ನಿಮ್ಮ ಜೀರ್ಣಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಅಭ್ಯಾಸವನ್ನು ಮಾಡಿದ ನಂತರ ನಿಮಗೆ ಆರಾಮದಾಯಕ ಅನುಭವ ಉಂಟಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments