ಸಾಮಾನ್ಯವಾಗಿ ಈ ಕೇರಳದ ಭಾಗಗಳಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ನಮ್ಮ ಕಡೆ ರಸ್ತೆ ಬದಿಯಲ್ಲಿ ಎಳನೀರು ಮಾರುವ ಹಾಗೆ ಅಲ್ಲಿ ಫ್ರೆಶ್ ಅಲೋವೆರಾದಿಂದ ನಮ್ಮ ಕಣ್ಣೆದುರಿಗೆ ಜ್ಯೂಸ್ ತಯಾರು ಮಾಡಿ ಕುಡಿಯಲು ಕೊಡುತ್ತಾರೆ.
(ದುಡ್ಡು ತೆಗೆದುಕೊಳ್ಳುತ್ತಾರೆ, ಡೋಂಟ್ ವರಿ). ಬಹಳಷ್ಟು ಜನರು ಇದನ್ನು ಇಷ್ಟಪಟ್ಟು ಕುಡಿಯುತ್ತಾರೆ. ಹಸಿ ಅಲೋವೆರಾ ಜ್ಯೂಸ್ ನಿಂದ ಆರೋಗ್ಯಕ್ಕೆ ಏನು ಲಾಭ ಎಂದು ನೀವು ಕೇಳಬಹುದು.
ಯಾರಿಗೆ ಚರ್ಮದ ಕೆರೆತ, ಚರ್ಮದ ಸೋಂಕು, ಚರ್ಮದ ಮೇಲೆ ಉಂಟಾದ ಗಾಯಗಳು ಇತ್ಯಾದಿಗಳಿಗೆ ಇದೊಂದು ಅದ್ಭುತ ಪರಿಹಾರ ಎಂದು ಹೇಳಬಹುದು. ಏಕೆಂದರೆ ಇದು ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿದೆ.
ಸಾಕಷ್ಟು ಜನರಿಗೆ ಅಲೋವೆರಾದ ಇಂತಹ ಪ್ರಯೋಜನಗಳು ಗೊತ್ತೇ ಇರುವುದಿಲ್ಲ. ಈ ಲೇಖನದಲ್ಲಿ ಯಾವೆಲ್ಲ ಚರ್ಮದ ಸಮಸ್ಯೆಗಳಿಗೆ ಅಲೋವೆರಾದಿಂದ ಲಾಭವಿದೆ ಎಂಬುದನ್ನು ತಿಳಿಸಿ ಕೊಡಲಾಗಿದೆ.
ಸುಟ್ಟ ಗಾಯಗಳಿಗೆ ಒಳ್ಳೆಯ ಪರಿಹಾರ
ಮನೆಯಲ್ಲಿ ಯಾವುದಾದರೂ ಕೆಲಸ ಕಾರ್ಯಗಳನ್ನು ಮಾಡುವ ಸಂದರ್ಭದಲ್ಲಿ ಅಪ್ಪಿತಪ್ಪಿ ನಿಮ್ಮ ಮೈ ಮೇಲೆ ಸುಟ್ಟ ಗಾಯಗಳು ಉಂಟಾದರೆ, ಅದಕ್ಕೆ ಫ್ರೆಶ್ ಅಲೋವೆರಾ ಜ್ಯೂಸ್ ಅನ್ವಯಿಸಿ ಕ್ರಮೇಣವಾಗಿ ಗಾಯವನ್ನು ವಾಸಿ ಮಾಡಿಕೊಳ್ಳಬಹುದು.
ಚರ್ಮದ ಸೋಂಕು
ಮೊದಲೇ ಹೇಳಿದಂತೆ ಅಲೋವೆರಾ ಜೆಲ್ ತನ್ನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫಾಮೇಟರಿ ಗುಣಲಕ್ಷಣಗಳನ್ನು ಹೆಚ್ಚಾಗಿ ಒಳಗೊಂಡಿದೆ. ಇದು ಚರ್ಮದ ಕಿರಿಕಿರಿಯನ್ನು ಮತ್ತು ಕೆರೆತವನ್ನು ತಪ್ಪಿಸಿ ಚರ್ಮದ ಮೇಲೆ ಕಂಡುಬರುವ ಉರಿಯನ್ನು ಉಪಶಮನ ಮಾಡುತ್ತದೆ.
ಚರ್ಮದ ಮೇಲೆ ಸುಟ್ಟ ಗಾಯಗಳು ಉಂಟಾದರೆ, ಸಾಮಾನ್ಯವಾಗಿ ಅಲ್ಲಿಗೆ ಸೇರಿರುವ ರಕ್ತನಾಳಗಳಲ್ಲಿ ರಕ್ತ ಹರಿಯುವಿಕೆ ನಿಂತುಹೋಗುತ್ತದೆ. ಇದು ಅಕ್ಕಪಕ್ಕದ ಚರ್ಮದ ಜೀವಕೋಶಗಳನ್ನು ಸಹ ಒಣಗುವಂತೆ ಮಾಡಿ ಗಾಯ ಮತ್ತಷ್ಟು ತೀವ್ರವಾಗುವಂತೆ ಮಾಡುತ್ತದೆ.
ಮೊದಲಿಗೆ ನೀವು ಅಲೋವೆರಾ ಎಲೆಯನ್ನು ಕತ್ತರಿಸಿ ಅದರಿಂದ ರಸ ತೆಗೆದುಕೊಂಡು, 1 ಬೌಲ್ ನಲ್ಲಿ ಸುರಿದುಕೊಂಡು, ಅದನ್ನು ಗಾಯದ ಮೇಲೆ ಅನ್ವಯಿಸಿ, ಅದಾಗದೆ ಒಣಗಲು ಬಿಡಿ. ನಂತರ ಇದನ್ನು ನೀರಿನಿಂದ ತೊಳೆಯಿರಿ. ದಿನದಲ್ಲಿ ಎರಡರಿಂದ ಮೂರು ಬಾರಿ ಈ ರೀತಿ ಮಾಡುವುದರಿಂದ ಚರ್ಮದ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆದುಕೊಳ್ಳಬಹುದು.