ಬೆಂಗಳೂರು: ಧೂಮಪಾನ ಮಾಡಿದರೆ ಆರೋಗ್ಯಕ್ಕೆ ಹಾನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗಿದ್ದರೂ ಧೂಮಪಾನ ಮಾಡುವುದನ್ನು ನಾವು ಬಿಡಲ್ಲ. ಆದರೆ ಇದೀಗ ಧೂಮಪಾನ ಬಿಡಲು ಇನ್ನೊಂದು ಕಾರಣವೂ ಇದೆ.
ಹೌದು. ಇತ್ತೀಚೆಗಿನ ಸಮೀಕ್ಷೆಯೊಂದರ ಪ್ರಕಾರ ಧೂಮಪಾನ ಮಾಡುವ ಹುಡುಗರನ್ನು ಹುಡುಗಿಯರೂ ಇಷ್ಟಪಡುವುದಿಲ್ಲವಂತೆ! ಧೂಮಪಾನ ಮಾಡುವ ಹುಡುಗರಿಗೆ ಹುಡುಗಿಯರು ಆಕರ್ಷಿತರಾಗುವುದಿಲ್ಲ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಸಮೀಕ್ಷೆಯಲ್ಲಿ 1000 ಮಂದಿ ಭಾಗಿಯಾಗಿದ್ದರು. ಇವರಲ್ಲಿ ಶೇ. 70 ರಷ್ಟು ಮಂದಿ ಸಿಗರೇಟು ಸೇದುವ ಹುಡುಗರು ತಮಗೆ ಇಷ್ಟವಾಗಲ್ಲ ಎಂದಿದ್ದಾರಂತೆ. ಹಾಗಾಗಿ ಪುರುಷರೇ, ಎಚ್ಚರದಿಂದಿರಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.