ಹೊಸದಿಲ್ಲಿ : 'ಕಾಂಗ್ರೆಸ್ ಮುಸ್ಲಿಮ್ ಪುರುಷರ ಪಕ್ಷವೇ ಅಥವಾ ಮುಸ್ಲಿಂ ಮಹಿಳೆಯರ ಪಕ್ಷವೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಮುಸ್ಲಿಮರ ಪಕ್ಷ ಎಂದು ರಾಹುಲ್ ಗಾಂಧಿ ಅವರು ಹೇಳಿರುವುದಕ್ಕೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಆಜಮ್ಗಢದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತಿದ್ದ ವೇಳೆ 'ಕಾಂಗ್ರೆಸ್ ಪಕ್ಷ ಕೇವಲ ಮುಸ್ಲಿಮ್ ಪುರುಷರ ಪರ ಇರುವ ಪಕ್ಷವೇ ಅಥವಾ ಮುಸ್ಲಿಂ ಮಹಿಳೆಯರ ಪರವೂ ಇರುವ ಪಕ್ಷವೇ ಎಂದು ನಾನು ರಾಹುಲ್ ಗಾಂಧಿ ಅವರನ್ನು ಕೇಳಲು ಬಯಸುತ್ತೇನೆ' ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಹಿತ ಹಲವು ಪಕ್ಷಗಳನ್ನು ತ್ರಿವಳಿ ತಲಾಕ್ ಪ್ರಶ್ನೆಯು ಸಾಕಷ್ಟು ಎಕ್ಸ್ ಪೋಸ್ ಮಾಡಿದೆ. ಒಂದು ಕಡೆ ಕೇಂದ್ರ ಸರಕಾರ ಮುಸ್ಲಿಂ ಮಹಿಳೆಯರ ಬದುಕನ್ನು ಸುಧಾರಿಸುವ ಪ್ರಯತ್ನ ಮಾಡುತ್ತಿದೆ; ಇನ್ನೊಂದೆಡೆ ಈ ಪಕ್ಷಗಳು ಅವರ ಬದುಕನ್ನು ದುರ್ಭರಗೊಳಿಸುವ ಯತ್ನದಲ್ಲಿ ನಿರತವಾಗಿವೆ' ಎಂದು ಹೇಳಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ