ಬೆಂಗಳೂರು : ಸಾಮಾನ್ಯವಾಗಿ ನಾವು ನೀರಿಗೆ ಇಳಿದಾಗ ನಮ್ಮ ಕೈ ಮತ್ತು ಕಾಲು ಬೆರಳುಗಳ ತುದಿಯಲ್ಲಿ ನೆರಿಗೆ ಮೂಡುತ್ತದೆ. ಇದು ಯಾವುದೋ ಸಮಸ್ಯೆಯಾಗಿರಬಹುದೆಂದು ಹಲವರು ಚಿಂತಿಸುತ್ತಾರೆ. ಆದರೆ ಇದಕ್ಕೆ ಕಾರಣವೆನೆಂಬುದು ಇಲ್ಲಿದೆ ನೋಡಿ.
ಕೈಗಳು ಮೃದುವಾಗಿರುವುದರಿಂದ ನಾವು ನೀರಿಗೆ ಇಳಿದಾಗ ವಸ್ತುಗಳನ್ನು ಹಿಡಿದುಕೊಳ್ಳಲು ಆಗುವುದಿಲ್ಲ. ಆದರೆ ಕೈಗಳಲ್ಲಿನ ಚರ್ಮಗಳು ಈ ರೀತಿ ಕುಗ್ಗಿದಾಗ ವಸ್ತುಗಳನ್ನು ದೃಢವಾಗಿ ಹಿಡಿದುಕೊಳ್ಳಬಹುದು. ಆದ್ದರಿಂದ ಇದಕ್ಕೆ ಆತಂಕಗೊಳ್ಳುವ ಅಗತ್ಯವಿಲ್ಲ. ಕೈಗಳು ಒಣಗಿದ ಮೇಲೆ ಇದು ಸರಿಯಾಗುತ್ತದೆ.
ಆದರೆ ನೀರಿಗೆ ಕೈ ಹಾಕದಿದ್ದರೂ ಈ ರೀತಿ ನೆರಿಗೆಗಳು ಮೂಡಿದ್ದರೆ ಇದು ಅನಾರೋಗ್ಯದ ಲಕ್ಷಣ. ಥೈರಾಯ್ಡ್ ಗ್ರಂಥಿಯಲ್ಲಿ ಸಮಸ್ಯೆ ಇದ್ದರೆ ಈ ರೀತಿ ಆಗುತ್ತದೆ. ಹಾಗೇ ದೇಹದ ತಾಪಮಾನ ಕಡಿಮೆಯಾದಾಗ ಈ ರೀತಿಯಾಗುತ್ತದೆ. ಆಗ ವೈದ್ಯರನ್ನು ಕಾಣುವುದು ಉತ್ತಮ.