ಬೆಂಗಳೂರು : ಊಟವಾದ ಬಳಿಕ ಬಡೆಸೊಪ್ (ಸೋಂಪು)ತಿನ್ನುವುದು ಅನಾದಿಕಾಲದಿಂದಲೂ ಬಂದ ಪದ್ಧತಿ. ಈ ಜಂಕ್ ಫುಡ್ ಯುಗದಲ್ಲಿ ಹಳೆಯ ಪದ್ದತಿಯನ್ನು ನಾವು ಮರೆತಿದ್ದೇವೆ. ಹಾಗು ಇಂತಹ ಆಹಾರಗಳಿಂದ ನಾವು ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದೇವೆ. ಊಟಮಾಡಿದ ನಂತರ ಸೋಪನ್ನು ಚೆನ್ನಾಗಿ ಅಗೆದು ನುಂಗುವುದರಿಂದ ಏನೆಲ್ಲಾ ಪ್ರಯೋಜನಗಳುಂಟಾಗುತ್ತವೆ ಎಂಬುದನ್ನು ತಿಳಿಯಿರಿ.
* ಅಜೀರ್ಣ, ಗ್ಯಾಸ್, ಅಸಿಡಿಟಿ ಮಲಬದ್ಧತೆ ಮೊದಲಾದ ಸಮಸ್ಯೆಗಳು ಅನೇಕರನ್ನು ಕಾಡುತ್ತಿವೆ. ಆದುದ್ದರಿಂದ ಈ ಸಮಸ್ಯೆಗಳಿಂದ ನರಳುತ್ತಿರುವವರು ಊಟವಾದ ನಂತರ ಒಂದು ಚಮಚ ಸೋಂಪು ತಿಂದರೆ, ಜೀರ್ಣಾಶಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
* ವಾತ ದೋಷವನ್ನು ನಿವಾರಿಸುವ ಗುಣವಿರುವುದರಿಂದ ಸೋಂಪನ್ನು ತಿನ್ನುವುದರಿಂದ ದೇಹದ ಅಧಿಕ ಭಾರ ಸಮಸ್ಯೆ ತೊಲಗುತ್ತದೆ.
* ಊಟದ ನಂತರ ಸೋಂಪನ್ನು ತಿಂದರೆ ಬಾಯಿ ಫ್ರೆಶ್ ಆಗಿರುತ್ತದೆ. ಬಾಯಲ್ಲಿರುವ ಬ್ಯಾಕ್ಟೀರಿಯಾ ಹಾಗು ಇತರೆ ಕ್ರಿಮಿಗಳು ನಾಶವಾಗುತ್ತವೆ. ಹಲ್ಲುಗಳು ಹಾಗು ವಸಡುಗಳು ಶುಭ್ರವಾಗುತ್ತವೆ.
* ಋತು ಸ್ರಾವದ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆ ನೋವಿರುತ್ತದೆ. ಸೋಂಪನ್ನು ತಿನ್ನುವುದರಿಂದ ನೋವು ಕಡಿಮೆಯಾಗುತ್ತದೆ ಹಾಗು ಋತು ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
* ಸೊಂಪಿನಲ್ಲಿ ಮ್ಯಾಂಗನೀಸ್, ಜಿಂಕ್, ಕಾಪರ್, ಐರನ್, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಸೆಲೆನಿಯಮ್ ಮೊದಲಾದ ಖನಿಜ, ಲವಣಗಳಿವೆ, ಇವುಗಳು ಹಲವು ರೀತಿಯ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ.
*ಸೋಂಪ ಸೇವನೆ ರಕ್ತವನ್ನು ವೃದ್ದ್ಧಿಗೊಳಿಸಿ. ರಕ್ತ ಹೀನತೆಯನ್ನು ನಿವಾರಿಸುತ್ತದೆ. ಕೆಂಪು ರಕ್ತ ಕಣಗಳ ಉತ್ಪತ್ತಿ ಹೆಚ್ಚುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ