ಬೆಂಗಳೂರು : ಬೆಳ್ಳುಳ್ಳಿ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುತ್ತದೆ ಎಂಬಂತೆ ಬೆಳ್ಳಿಳ್ಳಿಯನ್ನು ಅತಿಯಾಗಿ ಸೇವಿಸಿದರೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತದೆ.
*ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಲ್ಲಿಸಿನ್ ಅಂಶದಿಂದ ಪಿತ್ತಜನಕಾಂಗಕ್ಕೆ ನಂಜುಂಟಾಗಬಹುದು.
*ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದರಲ್ಲಿರುವ ಸಲ್ಫರ್ ಅಂಶಗಳಿಂದ ಅತಿಸಾರ ಅಥವಾ ಭೇದಿ ಉಂಟಾಗಬಹುದು.
*ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ವಾಕರಿಕೆ ಹಾಗೂ ವಾಂತಿ ಉಂಟಾಗಬಹುದು ಎಂದು ಅಮೆರಿಕದ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ತಿಳಿಸಿದೆ.
*ಬೆಳ್ಳುಳ್ಳಿಯನ್ನು ಹೆಚ್ಚಾಗಿ ತಿಂದರೆ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು
*ಯೋನಿ ಯೀಸ್ಟ್ ಸೋಂಕು ಇರುವವರು ಬೆಳ್ಳುಳ್ಳಿಯನ್ನು ಹೆಚ್ಚಾಗಿ ಸೇವಿಸಬಾರದು. ಸೋಂಕು ಹೆಚ್ಚಾಗಿ ಯೋನಿಯ ಕೋಮಲ ಅಂಗಾಂಶಗಳನ್ನು ಕಿರಿಕಿರಿಗೆ ಕಾರಣವಾಗಬಹುದು
*ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಕಣ್ಣಿನ ಐರಿಸ್ ಹಾಗೂ ಕಾರ್ನಿಯಾ ಮಧ್ಯದ ಖಾಲಿ ಜಾಗದಲ್ಲಿ ರಕ್ತಸ್ರಾವ ಉಂಟಾಗಬಹುದು. ಇದರಿಂದ ಕಣ್ಣು ಕಳೆದುಕೊಳ್ಳುವ ಸಾಧ್ಯತೆಯೂ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.