Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾತ್ರಿ ಮಲಗುವಾಗ ಕಾಲು ಸೆಳೆತ ಉಂಟಾಗಲು ಕಾರಣವೇನು ಗೊತ್ತಾ?

ರಾತ್ರಿ ಮಲಗುವಾಗ ಕಾಲು ಸೆಳೆತ ಉಂಟಾಗಲು ಕಾರಣವೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 26 ಜುಲೈ 2019 (06:18 IST)
ಬೆಂಗಳೂರು : ಕೆಲವರಿಗೆ ರಾತ್ರಿಯ ವೇಳೆ ಮಲಗುವಾಗ ಕಾಲು ಸೆಳೆತ ಉಂಟಾಗುತ್ತದೆ. ಇದರಿಂದ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ.ಈ ಕಾಲು ಸೆಳೆತ ಉಂಟಾಗಲು ಕಾರಣವೇನೆಂಬುದು ಇಲ್ಲಿದೆ ನೋಡಿ.




*ಅಲ್ಬರ್ಟಾವಿಶ್ವವಿದ್ಯಾಲದಲ್ಲಿರುವ ಕುಟುಂಬ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ಸ್ಕಾಟ್ ಗ್ಯಾರಿಸನ್ ರವರ ಪ್ರಕಾರ ಈ ಕಾಲು ಸೆಳೆತ ಚಳಿಗಾಲ ಮತ್ತು ಬೇಸಿಗೆಯಲ್ಲಿ ಸಾಮಾನ್ಯವಾಗಿ ಆಗಮಿಸುತ್ತವೆ. ಬೇಸಿಗೆಯ ಸಮಯದಲ್ಲಿ ಸೂರ್ಯನ ರಶ್ಮಿ ಪ್ರಖರವಾಗಿದ್ದು ವಿಟಮಿನ್ ಡಿ ಉತ್ಪಾದನೆಯೂ ಹೆಚ್ಚುವ ಕಾರಣ ಇವು ಗರಿಷ್ಟ ಮಟ್ಟಕ್ಕೇರುತ್ತವೆ ಹಾಗೂ ಈ ಹೆಚ್ಚುವರಿ ಪ್ರಮಾಣವನ್ನು ಗರಿಷ್ಟವಾಗಿ ಬಳಸಿಕೊಳ್ಳಲು ಹಾಗೂ ನೈಸರ್ಗಿಕವಾಗಿ ರಿಪೇರಿ ಮಾಡಿಕೊಳ್ಳುವ ಕಾರ್ಯ ತೀವ್ರಗತಿಯಲ್ಲಿ ಮುಂದುವರೆಯುವುದೇ ಈ ಸೆಡೆತಗಳಿಗೆ ಕಾರಣ ಎಂದಿದ್ದಾರೆ.


* ಕಾಲು ಸೆಳೆತಕ್ಕೆ ನಿರ್ಜಲೀಕರಣವೂ ಒಂದು ಕಾರಣ. ಸರಿಯಾಗಿ ನೀರು ಕುಡಿಯದಿದ್ದರೆ ರಕ್ತದಲ್ಲಿ ಎಲೆಕ್ಟ್ರೋಲೈಟುಗಳ ಸಮತೋಲನ ಏರುಪೇರಾಗುತ್ತದೆ. ಇದು ಕಾಲು ಸೆಳೆತಕ್ಕೆ ಕಾರಣವಾಗಬಹುದು.


* ನಿಮ್ಮ ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ, ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಕೊರತೆ ಉಂಟಾದಾಗ ಈ ಕಾಲು ಸೆಳೆತ ಕಾಣಿಸಿಕೊಳ್ಳುತ್ತದೆ.


*ಅತಿಯಾಗಿ ವ್ಯಾಯಾಮ ಮಾಡುವುದರಿಂದ ಕಾಲುಗಳ ಸ್ನಾಯುಗಳನ್ನು ಅತಿಯಾಗಿ ದಂಡಿಸುವುದರಿಂದಲೂ ಸೆಡೆತ ಎದುರಾಗಬಹುದು.


*ಬೆಳಿಗ್ಗೆ ತುಂಬಾ ಹೊತ್ತು ನಿಂತುಕೊಂಡೇ ಕೆಲಸ ಮಾಡಿದರೆ ನೀರು ದೇಹದ ಕೆಳಭಾಗದಲ್ಲಿ ಹೆಚ್ಚು ಸಂಗ್ರಹವಾಗುತ್ತದೆ. ಇದರಿಂದ  ರಾತ್ರಿ ಕಾಲು ಸೆಳೆತ ಉಂಟಾಗತ್ತದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಈ ಒಂದು ವಸ್ತು ಉಪಯೋಗಿಸಿ ನಿಮ್ಮ ಕೂದಲ ಎಲ್ಲಾ ಸಮಸ್ಯೆ ನಿವಾರಿಸಿಕೊಳ್ಳಿ!