Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಫ್ರಿಜ್ ಬಳಸದೇ ಕಟ್ ಮಾಡಿದ ಹಣ್ಣುಗಳನ್ನು ತಾಜಾವಾಗಿಡುವುದು ಹೇಗೆ ಗೊತ್ತಾ?

ಫ್ರಿಜ್ ಬಳಸದೇ  ಕಟ್ ಮಾಡಿದ ಹಣ್ಣುಗಳನ್ನು  ತಾಜಾವಾಗಿಡುವುದು ಹೇಗೆ ಗೊತ್ತಾ?
ಬೆಂಗಳೂರು , ಭಾನುವಾರ, 23 ಜೂನ್ 2019 (06:29 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾದರೂ ಅದನ್ನು ಅತಿ ಹೆಚ್ಚು ತಿನ್ನಲು ಆಗುವುದಿಲ್ಲ. ಅದರಲ್ಲೂ  ಸೇಬು, ಕಿವಿ ಹಣ್ಣುಗಳಂತಹ ಸಣ್ಣ ಸಣ್ಣ ಹಣ್ಣುಗಳನ್ನು ಒಂದೇ ಸಮಯದಲ್ಲಿ ತಿಂದು ಮುಗಿಸಬಹುದು. ಆದರೆ ಪಪ್ಪಾಯ, ಕಲ್ಲಂಗಡಿ ಹಣ್ಣುಗಳನ್ನು ಒಂದೇ ಬಾರಿ ತಿಂದು ಮುಗಿಸೋಕೆ ಆಗಲ್ಲ. ಬೇಸಿಗೆಕಾಲದಲ್ಲಿ ಇವುಗಳನ್ನು ಕಟ್ ಮಾಡಿ ಇಟ್ಟರೆ ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಅವುಗಳು ಹಾಳಾಗದಂತೆ ತಡೆಯಲು ಹೀಗೆ ಮಾಡಿ.




*ನಿಂಬೆ ರಸವು ಹಣ್ಣಿನ ಆಕ್ಸಿಡೀಕರಣವನ್ನು ತಡೆಯುತ್ತದೆ. ಆದ್ದರಿಂದ  ಕಟ್ ಮಾಡಿದ ಹಣ್ಣಿಗೆ ನಿಂಬೆ ರಸವನ್ನು ಹಚ್ಚುವುದರಿಂದ 6 ಗಂಟೆಗಳ ಕಾಲ ಅದನ್ನು ಹಾಳಾಗದಂತೆ ಇಡಬಹುದು.


*ಕಟ್ ಮಾಡಿದ ಹಣ್ಣುಗಳ ಪೀಸ್ ಗಳನ್ನು ಪ್ಲಾಸ್ಟಿಕ್ ಅಥವಾ ಅಲ್ಯೂಮಿನಿಯಂ ಕವರ್ ನೊಳಗೆ ಹಾಕಿ ಇಟ್ಟರೆ 3-4 ಗಂಟೆಗಳ ಕಾಲ ಹಾಗೇ ಇಡಬಹುದು.


*ಹಣ್ಣುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ತಣ್ಣಗಿರುವ ನೀರಿನಲ್ಲಿ ಇಟ್ಟರೆ 3-4 ಗಂಟೆಗಳ ಕಾಲ ತಾಜಾವಾಗಿರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ?