ಹಲ್ಲು ಹಾಗೂ ಬಾಯಿಯ ಆರೋಗ್ಯಕ್ಕೆ ನಾವು ಒತ್ತು ಕೊಡಲೇಬೇಕು. ಇಲ್ಲದಿದ್ದರೆ ತೊಂದರೆಗೆ ಸಿಲುಕುವುದು ಪಕ್ಕಾ.
ಊಟ, ತಿಂಡಿ ನಂತರ ಇಲ್ಲವೇ ನೀವು ಏನನ್ನಾದರೂ ತಿಂದ ಬಳಿಕ ಬಾಯಲ್ಲಿ ನೀರು ಹಾಕಿ ಮುಕ್ಕಳಿಸಲೇಬೇಕು.
ಕಡಿಮೆ ಎಂದರೂ 11 ಸಲ ಮುಕ್ಕಳಿಸಿದರೆ ಬಾಯಿ ರೋಗಗಳು ಕೊಂಚ ದೂರ ಓಡಬಹುದು.
ಬಿಸಿ ಆಹಾರ ತಿಂದ ಬಳಿಕ ತಣ್ಣನೆ ಆಹಾರ ಸೇವನೆ ಮಾಡಲೇಬಾರದು.