Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಂಟಲಿನಲ್ಲಿ ಸೇರಿಕೊಂಡಿರುವ ಕಫ ಹೊರಹಾಕಲು ಹೀಗೆ ಮಾಡಿ

ಗಂಟಲಿನಲ್ಲಿ  ಸೇರಿಕೊಂಡಿರುವ ಕಫ ಹೊರಹಾಕಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 27 ಜೂನ್ 2019 (09:24 IST)
ಬೆಂಗಳೂರು : ಶೀತ, ಕಫವಾದಾಗ ಗಂಟಿನಲ್ಲಿ ಕಫ್ ಸೇರಿಕೊಳ್ಳುತ್ತದೆ. ಇದರಿಂದ ಸರಿಯಾಗಿ ಉಸಿರಾಡಲು ಆಗದೆ ರಾತ್ರಿ ನಿದ್ದೆ ಮಾಡಲು ಕೂಡ ಕಷ್ಟವಾಗುತ್ತದೆ. ಈ ಗಂಟಲಿನಲ್ಲಿ ಸೇರಿಕೊಂಡ ಕಫವನ್ನು ಹೊಹಾಕಲು ಈ ವಿಧಾನ ಬಳಸಿ.




*ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಹಾಗೂ ಆ್ಯಂಟಿ-ಬ್ಯಾಕ್ಟೀರೀಯಾ ಗುಣಗಳು ಸೋಂಕುಗಳ ವಿರುದ್ಧ ಹೋರಾಡುತ್ತದೆ, 2 ಚಮಚ ನಿಂಬೆರಸ ಮತ್ತು 1 ಚಮಚ ಜೇನುತುಪ್ಪವನ್ನು ಒಂದು ಲೋಟ ಕುದಿಸಿದ ನೀರಿಗೆ ಬೆರೆಸಿ ಈ ಮಿಶ್ರಣವನ್ನು ದಿನಕ್ಕೆ 3 ಬಾರಿ ಸೇವಿಸಬೇಕು. ಹೀಗೆ ಮಾಡುವುದರಿಂದ ಗಂಟಲಿನ ಕಫ ಕರಗಿ ಹೊರಬರುತ್ತದೆ.


*1 ಚಮಚ ಕಾಳುಮೆಣಸಿನ ಪುಡಿ, ಅಷ್ಟೇ ಪ್ರಮಾಣದ ತುರಿದ ಶುಂಠಿ ಮತ್ತು ಜೇನುತುಪ್ಪಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ 2-3 ಸಲ ಸೇವಿಸಬೇಕು. ಇದರಿಂದ ಕಫ ನೀರಾಗಿ ಕರಗಿಹೋಗುತ್ತದೆ.


* ಶುಂಠಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಕುದಿಯುವ ನೀರಿನಲ್ಲಿ ಹಾಕಿ ಬೆರೆಯಲು ಬಿಡಬೇಕು. ನಂತರ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ 3- 4 ಬಾರಿ ಸೇವಿಸಬೇಕು. ಇದರಿಂದ ಗಂಟಲಿನ ಕಫ ನಿವಾರಣೆಯಾಗುತ್ತದೆ.




 

Share this Story:

Follow Webdunia kannada

ಮುಂದಿನ ಸುದ್ದಿ

ಹಲಸಿನ ಹಣ್ಣಿನಲ್ಲಿ ಅಡಗಿದೆ ಸೌಂದರ್ಯದ ಗುಟ್ಟು