Publish Date: Tue, 18 Apr 2017 (05:02 IST)
Updated Date: Tue, 18 Apr 2017 (05:06 IST)
ಬೆಂಗಳೂರು: ಬೇಸಿಗೆಯ ಬೇಗೆ ಈಗಾಗಲೇ ನಮ್ಮನ್ನು ತಟ್ಟುತ್ತಿದೆ. ಈ ಬೇಸಿಗೆಯಲ್ಲೂ ಸುಂದರ ತ್ವಚೆ ಉಳಿಸಿಕೊಳ್ಳಬೇಕಾದರೆ ಈ ಕೆಲವು ಟಿಪ್ಸ್ ಫಾಲೋ ಮಾಡಿ.
ಗಂಟೆ ನೋಡಿಕೊಳ್ಳಿ: ಸೂರ್ಯ ನೆತ್ತಿಗೇರಿದ ಹೊತ್ತು ಆದಷ್ಟು ಹೊರಗಡೆ ಸುತ್ತಾಡುವುದನ್ನು ತಪ್ಪಿಸಿ. ಏನೇ ಕೆಲಸವಿದ್ದರೂ, ಬಿಸಿಲು ಕಡಿಮೆಯಿರುವಾಗ ಮಾಡಿಕೊಳ್ಳಿ.
ಸರಿಯಾದ ಉಡುಪು: ಒಂದು ವೇಳೆ ಅನಿವಾರ್ಯವಾಗಿ ಹೊರಗಡೆ ಹೋಗುವುದಿದ್ದರೂ, ಸರಿಯಾದ ಉಡುಪು ಧರಿಸಿ. ಹೆಚ್ಚು ದಪ್ಪನೆಯ, ಹೊರಾವರಣವಿರುವ ಉಡುಪು ಧರಿಸಬೇಡಿ. ಸನ್ ಗ್ಲಾಸ್, ಕ್ಯಾಪ್ ಬಳಸಿ.
ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸುವುದಿದ್ದರೆ, 30 ನಿಮಿಷ ಮೊದಲೇ ಹಚ್ಚಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ಸಾಕಷ್ಟು ನೀರು ಕುಡಿಯುವ ಮೂಲಕ ದೇಹಲ್ಲಿ ದ್ರವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ