ಬೆಂಗಳೂರು : ಕೆಲವರು ಸುಂದರವಾಗಿ ಕಾಣಬೇಕೆಂದು ಸೌಂದರ್ಯವರ್ಧಕಗಳನ್ನು ಬಳಸಿಕೊಂಡು ಮೇಕಪ್ ಮಾಡಿಕೊಳ್ಳುತ್ತಾರೆ. ಆದರೆ ಇದು ಶಾಶ್ವತವಾಗಿರಲ್ಲ. ಮೇಕಪ್ ಮಾಡದೆ ನಿಮ್ಮ ಸೌಂದರ್ಯ ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ.
* ನಿಮ್ಮ ತ್ವಚೆಯನ್ನು ಯಾವಾಗಲು ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳುವುದು ಮುಖ್ಯ. ನಿರ್ಜಲೀಕರಣದ ಚರ್ಮವು ನಿಮ್ಮ ತ್ವಚೆಯನ್ನು ಶುಷ್ಕವಾಗಿ ಕಾಣುವಂತೆ ಮಾಡುವುದು. ನಿಮ್ಮ ತ್ವಚೆಯನ್ನು ತೇವಾಂಶದಿಂದ ನೋಡಿಕೊಳ್ಳುವುದರಿಂದ, ಚರ್ಮ ನಯವಾಗಿರುತ್ತದೆ.
* ನಿಮ್ಮ ದೇಹಕ್ಕೆ ಆರೋಗ್ಯಕರ ಆಹಾರ ನೀಡಿದಷ್ಟು, ನಿಮ್ಮ ಚರ್ಮ ಆರೋಗ್ಯಕರವಾಗಿರುತ್ತದೆ. ಇದರಿಂದ ನೀವು ಸುಂದರವಾಗಿ ಕಾಣಬಹುದು.
* ಹಣ್ಣಿನ ರಸ ಸೇವನೆ ಮಾಡುವುದು, ಅದು ನಿಮ್ಮ ದೇಹದ ತೂಕ ಕಡಿಮೆ ಮಾಡುವುದರ ಜೊತೆಗೆ, ಚರ್ಮವು ಆರೋಗ್ಯವಾಗಿ, ಆಕರ್ಷಕವಾಗಿರುತ್ತದೆ.
* ಮಿಟಮಿನ್ ಸಿ ಅಂಶವಿರುವ ತರಕಾರಿಗಳನ್ನು ಹೆಚ್ಚು ಸೇವಿಸಿ. ಇದರಿಂದ ನಿಮ್ಮ ಮೈಕಾಂತಿ ಹೆಚ್ಚಾಗುತ್ತದೆ.
*ದೇಹಕ್ಕೆ ಬೇಕಾಗುವಷ್ಟು ನೀರು ಕುಡಿಯಿರಿ. ಇದರಿಂದ ದೇಹದ ತೇವಾಂಶ ಹೆಚ್ಚಾಗುತ್ತದೆ. ನಿಮ್ಮ ತ್ವಚೆಯು ಹೆಚ್ಚು ಹೊಳಪಿನಿಂದ ಕೂಡಿರುತ್ತದೆ.