ಆರೋಗ್ಯಕರ ಜೀವನವು ಒಂದು ಆಯ್ಕೆಯಾಗುವುದರ ಬದಲಾಗಿ ಜೀವನದ ಮಾರ್ಗವಾಗಿರಬೇಕು. ಆದರೆ ಹೆಚ್ಚಿನ ಜನರು ಇದನ್ನು ಒಂದು ದಿನನಿತ್ಯದ ಕೆಲಸ ಎಂದು ಮಾಡುತ್ತಾರೆ. ನೀವು ಸಮತೋಲಿತ ಆಹಾರ ಅಥವಾ ಫಿಟ್ನೆಸ್ ದಿನಚರಿಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಲ್ಲಿ ಫಿಟ್ನೆಸ್ ಸಲಹಾ ಕಂಪನಿ 'ಬ್ಯಾಟಲ್ ಆಫ್ ಬಲ್ಜಸ್' ನ ಸಂಸ್ಥಾಪಕರಾದ ಚಿರಾಗ್ ಸೇಥಿ ಅವರ ಈ ಸಲಹೆಗಳನ್ನು ಅನುಸರಿಸಿ.
* ಪ್ರತಿದಿನ ಕನಿಷ್ಟ ಅರ್ಧ ಲೀಟರ್ ತಣ್ಣನೆಯ ನೀರನ್ನು ಕುಡಿಯಿರಿ. ತಣ್ಣನೆಯ ನೀರನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ದೇಹದ ತಾಪಮಾನವು ತಟಸ್ಥವಾಗಿರುತ್ತದೆ ಮತ್ತು ಇದು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಕುಡಿದ ತಣ್ಣನೆಯ ನೀರಿನ ಉಷ್ಣತೆಯನ್ನು ಸಾಮಾನ್ಯ ತಾಪಮಾನಕ್ಕೆ ತರುವಾಗ ದೇದಲ್ಲಿರುವ ಕ್ಯಾಲೋರಿಗಳು ಕಡಿಮೆಯಾಗುತ್ತದೆ.
* ದಿನವೂ ಖಾಲಿ ಹೊಟ್ಟೆಯಲ್ಲಿ 7-8 ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ಸೇವಿಸಿ. ಇದು ಚಯಾಪಚಯವನ್ನು ಹೆಚ್ಚಿಸಲು ಕೆಲವು ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಒಣಹಣ್ಣುಗಳು ಮತ್ತು ಬೀಜಗಳು ಶಕ್ತಿಯ ಸ್ಥಾವರವಾಗಿದೆ. ಶೇಂಗಾವನ್ನು ದಿನದ ಯಾವ ಸಮಯದಲ್ಲಾದರೂ ತಿನ್ನಬಹುದಾಗಿದೆ ಹಾಗೂ ಒಣ ದ್ರಾಕ್ಷಿ ವ್ಯಾಯಾಮದ ನಂತರದ ಚೇತರಿಕೆಗೆ ಬಹಳ ಉತ್ತಮವಾಗಿದೆ.
* ಬೆಳಗಿನ ಉಪಹಾರವು ಹೊಟ್ಟೆ ತುಂಬುವ ಹಾಗಿರಬೇಕು. ಅದು ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಭರಿತ ಆಹಾರ ಪದಾರ್ಥಗಳನ್ನು ಒಳಗೊಂಡಿರಬೇಕು.
* ನಿಮ್ಮ ನಿಯಮಿತ ವ್ಯಾಯಾಮದ ಅವಧಿಯನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ನಿಮ್ಮ ಕ್ಯಾಲೋರಿಗಳನ್ನು ಕಳೆದುಕೊಳ್ಳಲು ಸಹಾಯ ಮಾಡಲು ಸಾಧ್ಯವಾದಷ್ಟು ನಡೆಯಲು ಪ್ರಯತ್ನಿಸಿ.
* ಧ್ಯಾನ ಮತ್ತು ವಿಶ್ರಾಂತಿಯ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ನಿಮ್ಮ ಆಲೋಚನೆಗಳನ್ನು ನಿರ್ವಹಿಸುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಸಾಮಾನ್ಯ ಆರೋಗ್ಯ, ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಯೋಗೃ-ಕ್ಷೇಮಕ್ಕೆ ಒಳ್ಳೆಯದಾಗಿದೆ.
ನೀವೂ ಸಹ ಉತ್ತಮವಾದ ಮತ್ತು ಆರೋಗ್ಯಕರವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಲು ಬಯಸಿದರೆ ಈ ಸಲಹೆಗಳನ್ನು ಪಾಲಿಸಿ ಉತ್ತಮ ಫಲಿತಾಂಶವನ್ನು ನಿಮ್ಮದಾಗಿಸಿಕೊಳ್ಳಿ.