ಬೆಂಗಳೂರು: ಮುಖದ ಚರ್ಮದಷ್ಟೇ ದೇಹದ ಉಳಿದ ಭಾಗವೂ ಮುಖ್ಯವಾದದ್ದು. ಕೆಲವೊಮ್ಮೆ ನಮ್ಮ ನಿರ್ಲಕ್ಯದಿಂದ ದೇಹದ ಉಳಿದ ಭಾಗ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಹುಡುಗಿಯರಿಗೆ ತಮ್ಮಿಷ್ಟದ ಉಡುಪು ಧಿರಿಸುವಾಗ ತುಸು ಮುಜುಗರವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತೊಡೆಯ ಭಾಗ. ಮಿನಿ ಸ್ಕರ್ಟ್ ಗಳಂತಹ ಉಡುಪು ಧರಿಸುವ ಮನಸ್ಸಿದ್ದರೂ ಅಲ್ಲಿ ಕಪ್ಪು ಕಾಣಿಸುತ್ತದೆ ಎಂದು ಬೇಸರವಾಗುತ್ತದೆ. ಇಲ್ಲಿದೆ ನೋಡಿ ಈ ಸಮಸ್ಯೆಗೊಂದು ಮನೆಮದ್ದು.
ಸೂರ್ಯನ ಬೆಳಕಿಗೆ ಜಾಸ್ತಿ ತೆರೆದುಕೊಳ್ಳಬೇಡಿ: ಸೂರ್ಯನಿಗೆ ಹೆಚ್ಚು ಎಕ್ಸ್‌ಪೋಸ್ ಆಗುತ್ತಿದ್ದರೆ ತೊಡೆ ಕಪ್ಪಾಗುತ್ತದೆ. ಆ ಜಾಗಕ್ಕೆ ನಿಂಬೆ ರಸ, ಜೇನು ಮಿಕ್ಸ್ ಮಡಿ ಪ್ರತಿದಿನ ಹಚ್ಚುತ್ತ ಬಂದರೆ ಕಪ್ಪು ಕಡಿಮೆಯಾಗುತ್ತದೆ.
ಆರೋಗ್ಯಕರ ಜೀವನಶೈಲಿ : ಸರಿಯಾದಡಯಟ್ ಮತ್ತು ಆರೋಗ್ಯಕರ ಎಕ್ಸರ್‌ಸೈಜ್ ಈ ಎಲ್ಲಾ ಸಮಸ್ಯೆ ನಿವಾರಣೆಗೆ ಸಹಾಯಕವಾಗಿದೆ. ಇದರಿಂದ ಡಾರ್ಕ್ ಪ್ಯಾಚಸ್ ಮೊದಲಾದ ಸಮಸ್ಯೆ ನಿವಾರಣೆಯಾಗುತ್ತದೆ.
ಸಡಿಲ ಆದ ಡ್ರೆಸ್ ಧರಿಸಿ : ಹೆಚ್ಚಿನ ಮಹಿಳೆಯರು ತೊಡೆಯ ಬಳಿ ಬೆವರು ಮತ್ತು ಊದಿಕೊಳ್ಳುವ ಸಮಸ್ಯೆಯನ್ನು ಎದುರಿಸುತ್ತಾರೆ, ಅದರಲ್ಲೂ ಎಕ್ಸರ್‌ಸೈಜ್ ಅಥವಾ ನಡೆಯುವ ಸಂದರ್ಭದಲ್ಲಿ ಇದು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಲೂಸ್ ಆದ ಡ್ರೆಸ್ ಧರಿಸುವ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು.
ಗೈನಕಾಲಜಿಸ್ಟ್‌ನ್ನು ಭೇಟಿ ಮಾಡಿ: ಕೆಲವು ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ಡಾರ್ಕ್ ತೊಡೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಗೈನಕಾಲಜಿಸ್ಟ್‌ನ್ನು ಕನ್ಸಲ್ಟ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ