ಬೆಂಗಳೂರು : ಸಾಮಾನ್ಯವಾಗಿ ಮೂಗಿನ ಮೇಲೆ ಅಥವಾ ಅದರ ಅಕ್ಕಪಕ್ಕದ ಚರ್ಮಗಳಲ್ಲಿ ಕಪ್ಪು ಕಲೆಗಳು ಕಂಡುಬರುತ್ತದೆ. ಎಣ್ಣೆ ಚರ್ಮದವರಿಗೆ ಈ ಸಮಸ್ಯೆ ಅತಿ ಹೆಚ್ಚಾಗಿ ಕಾಡುತ್ತದೆ. ಎಷ್ಟೇ ತೊಳೆದರೂ ಸುಲಭವಾಗಿ ಹೋಗದ ಈ ಚುಕ್ಕೆಗಳು ಕ್ರಮೇಣ ಚರ್ಮದ ಆಳಕ್ಕೆ ಇಳಿಯುತ್ತವೆ. ಇದು ಮೂಖದ ಚರ್ಮದ ರಂಧ್ರದಲ್ಲಿ ತುಂಬಿರುವ ಕೊಳೆ. ಇದನ್ನು ಮನೆಯಲ್ಲೇ ಕೆಲವು ಮಸಾಜ್ ಗಳಿಂದ ಹೋಗಲಾಡಿಸಬಹುದು.
ಇದಕ್ಕೆ ನಿಂಬೆ ರಸ ಹಾಗು ಸಕ್ಕರೆಯನ್ನು ಮಿಶ್ರಣ ಮಾಡಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವುಗಳನ್ನು ಹೋಗಲಾಡಿಸಬಹುದು. ಅರಶಿನವನ್ನು ಕುಟ್ಟಿ ಪುಡಿಮಾಡಿ ಪುದೀನ ರಸದೊಂದಿಗೆ ಬೇರೆಸಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆ ನಿವಾರಣೆಯಾಗುತ್ತದೆ. ಹಸಿ ಆಲೂಗಡ್ಡೆಯನ್ನು ರುಬ್ಬಿ ಹಾಲಿನೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿ. ಇದರಿಂದಲೂ ಸಹ ಕಪ್ಪುಕಲೆ ತೊಲಗುತ್ತದೆ. ಕಿತ್ತಳೆ ಸಿಪ್ಪೆಯಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಇವು ನಿವಾರಣೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ