ಬೆಂಗಳೂರು: ಎಷ್ಟೇ ನೋವು ಅನುಭವಿಸಬೇಕಿದ್ದರೂ ನಾರ್ಮಲ್ ಡೆಲಿವರಿಯೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಾದರೆ ನಾರ್ಮಲ್ ಡೆಲಿವರಿಯಾಗಬೇಕಾದರೆ ನಾವು ಏನು ಮಾಡಬೇಕು? ಈ ಸಿಂಪಲ್ ಸ್ಟೆಪ್ ಮಾಡಿ ನೋಡಿ!
ಮಾನಸಿಕವಾಗಿ ಸಿದ್ಧರಾಗಿ
ನಾರ್ಮಲ್ ಡೆಲಿವರಿಯಾಗಬೇಕಾದರೆ ಬೇಕಾದುದು ಮಾನಸಿಕವಾಗಿ ತಯಾರಿ. ಗರ್ಭಿಣಿಯಾಗಿದ್ದಾಗ ನಿಯಮಿತವಾಗಿ ವ್ಯಾಯಾಮ, ಉಸಿರಾಟದ ಸಿಂಪಲ್ ಎಕ್ಸರ್ ಸೈಸ್ ನಂತಹ ನೋವು ನಿವಾರಕ ಸಿಂಪಲ್ ಥೆರಪಿಗಳನ್ನು ಮೈಗೂಡಿಸಿಕೊಳ್ಳಿ.
ದೈಹಿಕ ಕಸರತ್ತು
ಗರ್ಭಿಣಿಯಾದ ಮೇಲೆ ಸ್ವಲ್ಪವೂ ದೇಹಕ್ಕೆ ಕಸರತ್ತು ನೀಡದೇ ಇದ್ದರೆ ದೈಹಿಕ ವ್ಯಾಯಾಮ ಅಸಾಧ್ಯ. ಆದಷ್ಟು ಭಾರದ ವಸ್ತುಗಳನ್ನು ಎತ್ತಬೇಡಿ. ಆದರೆ ತೊಡೆ, ಗರ್ಭಾಶಯ ಹಾಗೂ ಮಾಂಸ ಖಂಡಗಳಿಗೆ ವ್ಯಾಯಾಮ ಸಿಗುವಂತಹ ಸರಳ ದೈಹಿಕ ಕಸರತ್ತು ನಡೆಸಿ.
ಆಹಾರ
ಸರಿಯಾದ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸಿ. ಹಾಗಂತ ಗರ್ಭಿಣಿ ಎಂದು ಮುದ್ದಿನಿಂದ ಕೊಡುವ ಎಲ್ಲಾ ಆಹಾರವನ್ನು ಸೇವಿಸಿಕೊಂಡು ತೂಕ ಹೆಚ್ಚಿಸಿಕೊಳ್ಳಬೇಡಿ.
ಒತ್ತಡ ಬೇಡ
ಗರ್ಭಿಣಿಯಾಗಿದ್ದಾಗ, ಪುಸ್ತಕ ಓದುವುದು, ಸಂಗೀತ ಆಲಿಸುವುದು ಮಾಡುತ್ತಾ ಮಾನಸಿಕ ಒತ್ತಡ ದೂರ ಮಾಡಿ.
ದ್ರವಾಂಶ
ಆದಷ್ಟು ಶರೀರ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಿ. ಹಾಗಾಗಿ ಸಾಕಷ್ಟು ನೀರು ಸೇವಿಸುತ್ತಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ